














ತೊಡಿಕಾನ ಗ್ರಾಮದ ಹರ್ಲಡ್ಕದಲ್ಲಿ ಸುಮಾರು ಒಂದು ವರ್ಷದ ಪ್ರಾಯದ ಆನೆ ಮರಿಯೊಂದು ಸಾವಿಗೀಡಾಗಿರುವ ಘಟನೆ ವರದಿಯಾಗಿದೆ.

ಹರ್ಲಡ್ಕದ ಚಂದ್ರಶೇಖರ ಎಂಬವರ ತೋಟದಲ್ಲಿ ಆನೆ ಮರಿ ಸಾವಿಗೀಡಾಗಿದೆ ಎಂದು ತಿಳಿದುಬಂದಿದ್ದು, ಭಾಗಮಂಡಲದ ಮೀಸಲು ಅರಣ್ಯದಿಂದ ಆನೆಗಳ ಹಿಂಡು ಚಂದ್ರಶೇಖರರ ತೋಟಕ್ಕೆ ಬಂದು ಕಾಫಿ, ಬಾಳೆ ಕೃಷಿನಾಶ ಪಡಿಸಿದೆ. ಎತ್ತರ ಪ್ರದೇಶವಾಗಿರುವುದರಿಂದ ಆನೆಗಳು ವಾಪಾಸು ಕಾಡಿಗೆ ಹೋಗುವಾಗ ಮರಿಯಾನೆಯೊಂದು ಜಾರಿ ಬಿದ್ದಿದೆ. ಇತರ ಆನೆಗಳು ಅದಕ್ಕೆ ಮೆಟ್ಟಿರುವುದರಿಂದ ಮರಿಯಾನೆ ಸಾವಿಗೀಡಾಗಿರಬಹುದೆಂದು ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.








