ವಾಹನ ಸಂಚಾರಕ್ಕೆ ಪರ್ಯಾಯ ಕಾಂತಮಂಗಲ ಅಜ್ಜಾವರ ರಸ್ತೆ ಬಳಕೆಗೆ ಸೂಚನೆ














ಆಲೆಟ್ಟಿ ಬಡ್ಡಡ್ಕ ಮುಖ್ಯ ರಸ್ತೆಯ ನಾಗಪಟ್ಟಣ ಪಯಸ್ವಿನಿ ನದಿಯ ಸೇತುವೆ ಕಾಮಗಾರಿ ಕೆಲಸ ಅ.26 ರಿಂದ ಆರಂಭಗೊಳ್ಳಲಿದ್ದು ಈ ಮಾರ್ಗವಾಗಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗುವುದು.
ಆಲೆಟ್ಟಿ ಮಾರ್ಗವಾಗಿ ಬಡ್ಡಡ್ಕ, ಕೂರ್ನಡ್ಕ, ಕಲ್ಲಪಳ್ಳಿ ಹಾಗೂ ನಾರ್ಕೋಡು ಕೋಲ್ಚಾರು ಮಾರ್ಗವಾಗಿ ಬಂದಡ್ಕ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಪರ್ಯಾಯ ರಸ್ತೆಯಾಗಿ ಕಾಂತಮಂಗಲ ಅಜ್ಜಾವರ ರಸ್ತೆಯ ಮೂಲಕ ಸಂಚರಿಸಬೇಕಾಗುವುದು.
ಅ.26 ರಿಂದ ನವೆಂಬರ್ 30 ರ ತನಕ ತಿಂಗಳ ಕಾಲ ಕಾಮಗಾರಿ ಕೆಲಸವು ಸುಮಾರು 1 ಕೋಟಿ ವೆಚ್ಚದಲ್ಲಿ ನಡೆಯಲಿದೆ. ಪರ್ಯಾಯ ರಸ್ತೆ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ದರ್ಶನ್ ರವರು ಆದೇಶಿಸಿರುತ್ತಾರೆ.






