ಸುಳ್ಯ ದಸರಾ ಉತ್ಸವದಲ್ಲಿ ಸಾರ್ವಜನಿಕ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗ

0

ಸುಳ್ಯ‌ ದಸರಾ ಉತ್ಸವದ 7 ನೇ ದಿನವಾದ ಅ.22ರಂದು ರಾತ್ರಿ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗ ನಡೆಯಿತು.

ಪುರೋಹಿತ ನಾಗರಾಜ ಭಟ್ ರ ಪೌರೋಹಿತ್ಯದಲ್ಲಿ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಸುಳ್ಯ ಇವರ ಸಹಕಾರದಲ್ಲಿ ಚಂಡಿಕಾ ಮಹಾಯಾಗ ನಡೆಯಿತು. ಇದೇ ಸಂದರ್ಭದಲ್ಲಿ ಮಾತೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ ನಡೆಯಿತು. ಸುಮಾರು 2000ಕ್ಕಿಂತಲೂ ಅಧಿಕ ಮಂದಿ ಪೂಜೆ ಮಾಡಿಸಿದ್ದರು. ಮಳೆ ಇದ್ದರೂ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡರು.