ಎಕ್ಸೆಲ್ ಚೆಸ್ ಟ್ರೋಫಿ: ಎಂ.ಜಿ.ಎಂ ನ ರೋಹಿತಾಶ್ವಗೆ ಆರನೇ ಸ್ಥಾನ

0

ಬೆಳ್ತಂಗಡಿಯ ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಶಾಲೆಯಲ್ಲಿ ಅಕ್ಟೋಬರ್ 25ರಂದು ನಡೆದ ಅಂತರ ಶಾಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮಹಾತ್ಮ ಗಾಂಧಿ ಮಲ್ನಾಡ್ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ರೋಹಿತಾಶ್ವ ಆರನೇ ಸ್ಥಾನವನ್ನು ಪಡೆದುಕೊಂಡಿದ್ದಾನೆ.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ರೋಹಿತಾಶ್ವ ಉತ್ತಮ ಪ್ರದರ್ಶನ ನೀಡಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಈತ ಕೊಡಿಯಾಲ ಬೈಲು ಹರೀಶ್ ಕುಮಾರ್ ಮತ್ತು ಹರಿಣಾಕ್ಷಿ ಇವರ ಪುತ್ರ.