













ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಾಲ್ಮೀಕಿ ಜಯಂತಿಯ ಆಚರಣೆಯನ್ನು ಅ.26ರಂದು ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಅವರು ಮಾತನಾಡಿ “ಆದರ್ಶ ವ್ಯಕ್ತಿಗಳ ಜಯಂತಿಯ ಆಚರಣೆಯ ಮೂಲಕ ಅವರ ಸಾಧನೆಯ ಮಹತ್ವವನ್ನು ತಿಳಿಯಲು ಸಾಧ್ಯ. ಆದಿ ಕವಿಯಾಗಿ, ಋಷಿಯಾಗಿ ಮಾಡಿದ ಸಾಧನೆ ಅಪಾರ. ಜಗತ್ತಿನ ಪ್ರಪ್ರಥಮ ಶ್ಲೋಕವನ್ನು ರಚಿದವರು ವಾಲ್ಮೀಕಿ. ರಾಮಾಯಣದ ಕರ್ತೃವಾಗಿ ಅದರ ಒಂದು ಪಾತ್ರವೂ ಆಗಿ ರಾಮನ ಮಕ್ಕಳಾದ ಕುಶಲವರಿಗೆ ವಿದ್ಯಾ ಗುರುವಾಗಿ ವಾಲ್ಮೀಕಿ ಪೂಜ್ಯರಾಗಿದ್ದಾರೆ. ರಾಮನ ಜೀವನದ ಕಥೆಯ ಮೂಲಕ ಸತ್ಯ, ಧರ್ಮ, ನ್ಯಾಯವನ್ನು ಜಗತ್ತಿಗೆ ಸಾರಿದವರು. ರಾಮಾಯಣ ಕಾವ್ಯದ ಕರ್ತೃ ವಾಗಿ ಅದರಲ್ಲಿ
ನಮ್ಮ ಎರಡು ಮಹಾನ್ ಕಥೆಗಳಾದ ರಾಮಾಯಣ ಮತ್ತು ಮಹಾಭಾರತಗಳು ನಮಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ತಿಳಿಸಿಕೊಡುತ್ತವೆ.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಮುಖ್ಯ ಶಿಕ್ಷಕ ದೇವಿಪ್ರಸಾದ ಜಿ.ಸಿ ಅವರು ಮಾತನಾಡಿದರು.
ಸಭೆಯಲ್ಲಿ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ದೇವಿಪ್ರಸಾದ ಜಿ.ಸಿ ಸ್ವಾಗತಿಸಿ, ಶಿಕ್ಷಕಿ ಜಯಂತಿ ವಂದಿಸಿದರು. ಶಿಕ್ಷಕಿ ಸವಿತಾ ಯಂ ನಿರೂಪಿಸಿದರು.







