













ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ವತಿಯಿಂದ ಕರ್ನಾಟಕ ರಾಜ್ಯದಾದ್ಯಂತ ಸಂಚರಿಸಲಿರುವ ಕನ್ನಡ ಯಾತ್ರಾ ರಥಕ್ಕೆ ಸುಳ್ಯ ಪ್ರೆಸ್ ಕ್ಲಬ್ ಆವರಣದಲ್ಲಿ ಅ. 26 ರಂದು ಚಾಲನೆ ನೀಡಲಾಯಿತು.
ಅಭಿಯಾನದ ರಾಜ್ಯಸಮಿತಿ ಸಲಹೆಗಾರರು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಘಟಕದ ಸಭಾಪತಿಗಳಾದ ಪಿ ಬಿ ಸುಧಾಕರ್ ರೈ ರವರು ಅಭಿಯಾನದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ರವರಿಗೆ ಕನ್ನಡ ಧ್ವಜ ಹಸ್ತಾಂತರಿಸುವ ಮೂಲಕ ‘ಕನ್ನಡ ಯಾತ್ರ ರಥ’ಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಭಿಯಾನದ ಸುಳ್ಯ ತಾಲೂಕು ಸಮಿತಿಯ ಅಧ್ಯಕ್ಷರಾದ ಹಸೈನಾರ್ ಜಯನಗರ,ಉಪಾಧ್ಯಕ್ಷರುಗಳಾದ ರಂಜಿತ್ ಪೂಜಾರಿ, ಶಂಕರ್ ಪೆರಾಜೆ, ಸಂಘಟನಾ ಕಾರ್ಯದರ್ಶಿ ಅಶೋಕ್ ಪೀಚೆ ಮೊದಲಾದವರು ಉಪಸ್ಥಿತರಿದ್ದರು.







