ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಪಾದಯಾತ್ರೆ- ಎರಡು ಬದಿ ತಾತ್ಕಾಲಿಕ ಅಟೋ ನಿಲ್ದಾಣ















ಆಲೆಟ್ಟಿಯ ಅಂತರ್ ರಾಜ್ಯ ಸಂಪರ್ಕದ ಮುಖ್ಯ ರಸ್ತೆಯ ನಾಗಪಟ್ಟಣ ಪಯಸ್ವಿನಿ ನದಿಗೆ ನಿರ್ಮಿಸಲಾಗಿರುವ ಸೇತುವೆ ಕಾಮಗಾರಿ ಕೆಲಸಕ್ಕೆ ಚಾಲನೆ ದೊರೆತ ಹಿನ್ನೆಲೆಯಲ್ಲಿ ಆಲೆಟ್ಟಿ ಬಡ್ಡಡ್ಕ ಮತ್ತು ಕೋಲ್ಚಾರು ಬಂದಡ್ಕ ಕಡೆಯಿಂದ ಬರುವ ಪ್ರಯಾಣಿಕರಿಗೆ ಸುತ್ತು ಬಳಸಿ ಅಜ್ಜಾವರ ರಸ್ತೆಯಲ್ಲಿ ಬರಬೇಕಾದ ಅನಿವಾರ್ಯತೆ ಉಂಟಾಗಿದೆ.
ಆಲೆಟ್ಟಿಯ ಮಿತ್ತಡ್ಕದಲ್ಲಿರುವ ರೋಟರಿ ಶಾಲೆಯ ವಿದ್ಯಾರ್ಥಿಗಳನ್ನು ಎರಡು ಬದಿಯಲ್ಲಿ ಶಾಲಾ ವಾಹನಗಳನ್ನು ಇರಿಸಿಕೊಂಡು ಮಕ್ಕಳನ್ನು ಶಾಲೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಎರಡು ಬದಿಯಲ್ಲಿ ಅಟೋ ರಿಕ್ಷಾಗಳನ್ನು ನಿಲ್ಲಿಸಿರುವುದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಪಕ್ಕದಲ್ಲಿರುವ ಅಣೆಕಟ್ಟಿನ ಮೇಲೆ ಕನಿಷ್ಠ ಪಕ್ಷ ದ್ವಿಚಕ್ರ ವಾಹನ ಸವಾರರಿಗೆ ಅವಕಾಶ ಮಾಡಿಕೊಡುತ್ತಿದ್ದರೆ ಅನೂಕೂಲಕರವಾಗುತ್ತಿತ್ತು ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮಾಹಿತಿಗಾಗಿ ಗಾಂಧಿನಗರ ಆಲೆಟ್ಟಿ ಕ್ರಾಸ್ ನಲ್ಲಿ ಬ್ಯಾರಿಕೇಡ್ ಇರಿಸಿ ಬ್ಯಾನರ್ ಅಳವಡಿಸಲಾಗಿದೆ. ಒಂದು ಬದಿಯಲ್ಲಿ ಮಣ್ಣು ಹಾಕಿ ಬಂದ್ ಮಾಡಲಾಗಿದೆ.








