ಸಿ.ಎ. ಫೌಂಡೇಷನ್ ಪರೀಕ್ಷೆ ಮತ್ತು ಸಿ.ಎ. ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಸಿದ್ಧಾರ್ಥ್ ರೈ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

0

 

ಹೊಸದೆಹಲಿಯ ಲೆಕ್ಕ ಪರಿಶೋಧಕ ಸಂಸ್ಥೆ Institute of Chartered Accountants of India (ಐ.ಸಿ.ಎ.ಐ) ಮೇ 2022 ರಲ್ಲಿ ನಡೆಸಿದ ನಡೆಸಿದ C.A Foundation ಪರೀಕ್ಷೆ ಮತ್ತು C.A Intermediate ಪರೀಕ್ಷೆಗಳಲ್ಲಿ ಸಿದ್ಧಾರ್ಥ್ ರೈ ಅಡ್ಡಬೈಲುರವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ನಿಂತಿಕಲ್ಲಿನ ವರ್ಷ ನಗರದಲ್ಲಿರುವ ಕೆ.ಎಸ್ ಗೌಡ ವಿದ್ಯಾಸಂಸ್ಥೆಯಲ್ಲಿ ತಮ್ಮ ಪ್ರಾಥಮಿಕ, ಪ್ರೌಢ ಮತ್ತು ಪ.ಪೂ. ಶಿಕ್ಷಣವನ್ನು ಪಡೆದಿರುವ ಇವರು ಮಂಗಳೂರಿನ ತ್ರಿಶಾ ಕ್ಲಾಸಸ್ ನಲ್ಲಿ ಸಿ.ಎ. ಫೌಂಡೇಷನ್, ಸಿ.ಎ. ಐ.ಪಿ.ಸಿ.ಸಿ. ತರಬೇತಿಯೊಂದಿಗೆ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ದ್ವೀತಿಯ ಸ್ಥಾನವನ್ನು ಪಡೆದಿರುವ ಇವರು ವಿದೇಶದಲ್ಲಿ ಉದ್ಯೋಗಿಯಾಗಿರುವ ತಾರಾನಾಥ ರೈ ಮತ್ತು ಸುರೇಖಾ ರೈ ಐಗಿರಿ ಅಡ್ಡಬೈಲು ಇವರ ಪುತ್ರ. ಇವರನ್ನು ಕೆ.ಎಸ್. ಗೌಡ ಎಜ್ಯುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ
ಅಶೋಕ್ ಕುಮಾರ್ ಕೆ.ಎಸ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಸದಾನಂದ ರೈ ಕುವೆಂಜ ಅಭಿನಂದಿಸಿದ್ದಾರೆ.