ಪಂಜ: ಬಳ್ಪದಲ್ಲಿ ಸಿಕ್ಕಿಬಿದ್ದ ಸ್ಕೂಟಿ ಕದ್ದ ಯುವಕ

0

* ನ್ಯಾಯಾಂಗ ಬಂಧನ*

ಪಂಜದ ಪುತ್ತು ಸಾಹೇಬ್ ಎಂಬವರ ಸ್ಕೂಟಿಯನ್ನು ಯುವಕನೊಬ್ಬ ಕದ್ದೊಯ್ದಾಗ ಸ್ಥಳೀಯರಿಗೆ ಮಾಹಿತಿ ನೀಡಿ ಸಿಕಿಬಿದ್ದು ನ್ಯಾಯಾಂಗ ಬಂಧನವಾದ ಘಟನೆ ವರದಿಯಾಗಿದೆ.

ಐವತೊಕ್ಲು ಗ್ರಾಮದ ಪುತ್ತು ಸಾಹೇಬ್ ಎಂಬವರು ಪಂಜದಲ್ಲಿ ಚಪ್ಪಲಿ ಅಂಗಡಿ ಹೊಂದಿದ್ದು, ಆ.30 ರ ಸಂಜೆ 6 ಗಂಟೆ ಸುಮಾರಿಗೆ ಯುವಕನೊಬ್ಬ ಪುತ್ತು ಅವರ ಸ್ಕೂಟಿಯ ಬಣ್ಣದ ಸ್ಕೂಟಿಯನ್ನು ಚಲಾಯಿಸಿಕೊಂಡು ಹೋಗಿರುವುದನ್ನು ಪುತ್ತು ಅವರು ಗಮನಿಸಿದ್ದಾರೆ. ತಕ್ಷಣ ತಾನು ಮಾಮೂಲಾಗಿ ಸ್ಕೂಟಿ ನಿಲ್ಲಿಸಿರುವಲ್ಲಿಗೆ ಹೋಗಿ ನೋಡಿದಾಗ ಸ್ಕೂಟಿ ಇರಲಿಲ್ಲವೆನ್ನಲಾಗಿದೆ. ಕೂಡಲೇ ಅವರು ಬಳ್ಪದ ಕೆಲವರಿಗೆ ತಿಳಿಸಿದ್ದು ಅಲ್ಲಿ ಅಡ್ಡಹಾಕಿ ಸ್ಕೂಟಿ ಕದ್ದವನನ್ನು ಹಿಡಿಯಲಾಗಿದೆ. ಅದಾಗಲೇ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಅವರು ಬಳ್ಪಕ್ಕೆ ಬಂದು ಯುವಕನನ್ನು ವಶಪಡಿಸಿದ್ದಾರೆ. ಯುವಕ ಏನೆಕಲ್ಲಿನ ಶ್ವೇತನ್ ಎಂದು ತಿಳಿದುಬಂದಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದು ಬಂದಿದೆ.