ಗುತ್ತಿಗಾರು : ಅಜಾದಿ ಕಾ ಅಮೃತಮಹೋತ್ಸವ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ

0

 

ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಶನ್ ಮತ್ತು ಸಂಟ್ ಮೇರಿಸ್ ಚರ್ಚ್ ಗುತಿಗಾರು ಸಂಯುಕ್ತವಾಗಿ ಗುತಿಗಾರು ಗ್ರಾಮದ ಪ್ರೌಢ ಶಾಲಾ ಮಕ್ಕಳಿಗೆ. 75 ನೇ ಸ್ವಾತಂತ್ರ್ಯತ್ಸವ ಪ್ರಯುಕ್ತ “ಪ್ರಜಾಪ್ರಭುತ್ವ ದೇಶ, ನನ್ನ ಭಾರತ ” ಎಂಬ ವಿಷಯದ ಬಗ್ಗೆ ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಸೆ.18 ರಂದು ಗುತಿಗಾರು ಚರ್ಚಿನ ಸಭಾ ಭವನದಲ್ಲಿ ನಡೆಯಿತು.

 

ಗುತಿಗಾರು ಸರಕಾರಿ ಪ್ರೌಢ ಶಾಲೆಯ
ಮುಖ್ಯಯೋಪಾಧ್ಯಾಯರಾದ ನೆಲ್ಸನ್ ಕಾಸ್ಟಲೀನೋ ದೀಪ ಬೆಳಗಿಸಿ ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿದರು.

ಗುತಿಗಾರು ಚರ್ಚಿನ
ಧರ್ಮಗುರು ಫಾ ಆದರ್ಶ್ ಜೋಸೆಫ್ ಮಾತನಾಡುತ್ತಾ ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಭಾಗವಹಿಸಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕೆಂದು ಕರೆಯಿತ್ತರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪತ್ರಕರ್ತ ಮಹೇಶ್ ಪುಚ್ಚಪಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಠಾಣೆಯ ಎ.ಎಸ್. ಐ. ತೋಮಸ್. ಇ . ಜಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು, ಫಲಕ, ಪ್ರಶಸ್ತಿ ಪತ್ರ ವಿತರಿಸಲಾಯಿತು.
ವೇದಿಕೆಯಲ್ಲಿ ಕೆ. ಎಸ್. ಎಂ. ಸಿ. ಎ ಗುತಿಗಾರು ಘಟಕದ ಅಧ್ಯಕ್ಷರು ಜೋರ್ಜ್. ಕೆ.ಎಂ ಅಧ್ಯಕ್ಷತೆಯನ್ನು ವಹಿಸಿದರು. ಕೇಂದ್ರ ಕಮಿಟಿ ಅಧ್ಯಕ್ಷ ಬಿಟ್ಟಿ ಪ್ರಸ್ತಾವಿಕ ಭಾಷಣ ಮಾಡಿದರು. ಸಿಜೊ ಅಭ್ರಾಹಾಂ ಸ್ವಾಗತಿಸಿ, ಶೈಜು ವಂದಿಸಿದರು. ಶ್ರೀಮತಿ ಜಿಸ್ಮಿ ಲಿಜೊ ಕಾರ್ಯಕ್ರಮ ನಿರೂಪಿಸಿದರು.