ಸುಳ್ಯ ರೋಟರಿ ಕ್ಲಬ್ ವತಿಯಿಂದ ವಿದ್ಯಾಸಿರಿ ಯೋಜನೆಯಡಿ ಕಾರ್ಯಕ್ರಮ

0

ರೋಟರಿ ಜಿಲ್ಲಾ ರಾಜ್ಯಪಾಲರ ಭೇಟಿ

ರೋಟರಿ ಸಂಸ್ಥೆಯಿಂದ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ- ರೋ.ಪ್ರಕಾಶ್ ಕಾರಂತ್


ಸುಳ್ಯ ರೋಟರಿ ಕ್ಲಬ್ ವತಿಯಿಂದ ವಿದ್ಯಾಸಿರಿ ಯೋಜನೆಯಡಿ ಕಲಿಕಾ ಆಸರೆ ಕಿಟ್ ವಿತರಣೆ,ವೃತ್ತಿ ಮಾರ್ಗದರ್ಶನ ತರಬೇತಿ ಉದ್ಘಾಟನೆ ಹಾಗೂ ಶಾಲಾ ಕೃತಿ ಸಂಪುಟಕ್ಕೆ ಫೈಲ್ ವಿತರಣೆ ಇಂದು ರೋಟರಿ ಸಭಾಭವನದಲ್ಲಿ ನಡೆಯಿತು.

ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ರೋ.ಚಂದ್ರಶೇಖರ ಪೇರಾಲು ಸಭಾಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ರೋಟರಿ ಜಿಲ್ಲಾ ರಾಜ್ಯಪಾಲರಾದ ರೋ.ಪ್ರಕಾಶ್ ಕಾರಂತ್ ಮಾತನಾಡಿ ಶಿಕ್ಷಣ ಕ್ಷೇತ್ರ ಬಹಳ ಬದಲಾವಣೆ ಕಾಲಘಟದಲ್ಲಿದೆ. ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಸಾಮಾಜಿಕ ಸಂಸ್ಥೆಗಳ ಕೊಡುಗೆ ಬಹಳಷ್ಟಿದೆ.ರೋಟರಿ ಸಂಸ್ಥೆಯಿಂದ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ಕಾಣುತ್ತಿದ್ದೇವೆ.ಜಲಸಿರಿ,ವನಸಿರಿ,ಆರೋಗ್ಯ ಸಿರಿ ಎಂಬ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಚಂದ್ರಶೇಖರ ಪೇರಾಲುರವರ ನೇತೃತ್ವದಲ್ಲಿ ನಡೆಯುವ ಸಾಮಾಜಿಕ ಕಾರ್ಯಕ್ರಮಗಳು ಇತರ ಕ್ಲಬ್ ಗಳಿಗೆ ಮಾದರಿ ಎಂದು ಹೇಳಿದರು.


ಇನ್ನೊರ್ವ ಮುಖ್ಯ ಅತಿಥಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ಎನ್. ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದಾನಿಗಳ ನೆರವಿನಿಂದ 50 ಮಂದಿ ವಿದ್ಯಾರ್ಥಿಗಳಿಗೆ ಕಲಿಕಾ ಕಿಟ್,ಅಡ್ಪಂಗಾಯ ಹಿ.ಪ್ರಾ.ಶಾಲೆಗೆ ಫೈಲ್ ವಿತರಣೆ, ಅಡ್ಕಾರ್ ವನಸುಮ ಹಾಸ್ಟೆಲ್ ಗೆ ಪೈಬರ್ ಚಯರ್, ಟಿ.ಬಿ.ರೋಗಿಗಳಿಗೆ ಫುಡ್ ಕಿಟ್ ವಿತರಣೆಯನ್ನು ಹಮ್ಮಿಕೊಳ್ಳಲಾಯಿತು.


ವೇದಿಕೆಯಲ್ಲಿ ರೋಟರಿ ಜಿಲ್ಲಾ ಸಹಾಯಕ ಗವರ್ನರ್ ರೋ‌.ಶಿವರಾಮ ಏನೆಕಲ್ಲು, ಜಿಲ್ಲಾ ಕಾರ್ಯದರ್ಶಿ ರೋ.ನಾರಾಯಣ ಹೆಗ್ಡೆ, ಝೋನಲ್ ಲೆಫ್ಟಿನೆಂಟ್ ರೋ.ಪ್ರೀತಮ್ ಡಿ.ಕೆ.,ರೋಟರಿ ನಿಕಟಪೂರ್ವಾಧ್ಯಕ್ಷ ರೋ.ಪ್ರಭಾಕರ ನಾಯರ್,ರೋ.ಮೀನಾಕ್ಷಿ ಗೌಡ, ರೋ.ಸಿ‌ಎ ಗಣೇಶ್ ಭಟ್,ನಿಯೋಜಿತ ಅಧ್ಯಕ್ಷ ರೋ.ಆನಂದ ಖಂಡಿಗ,ಕಾರ್ಯದರ್ಶಿ ರೋ.ಮಧುರಾ ಎಂ.ಆರ್.ಉಪಸ್ಥಿತರಿದ್ದರು.
ಅಧ್ಯಕ್ಷ ಚಂದ್ರಶೇಖರ ಪೇರಾಲು ಸ್ವಾಗತಿಸಿದರು. ಗಣೇಶ್ ಭಟ್ ಅತಿಥಿಗಳನ್ನು ಪರಿಚಯಿಸಿದರು.ಕಾರ್ಯದರ್ಶಿ ಮಧುರಾ ಎಂ.ಆರ್.ವಂದಿಸಿದರು. ರಮಾ ವೈ .ಕೆ. ಕಾರ್ಯಕ್ರಮ ನಿರೂಪಿಸಿದರು.