ಸುಳ್ಯ ಪರಿವಾರಕಾನದ ಬಾಡಿಗೆ ಕೋಣೆಯಲ್ಲಿ ಮೃತ ಪಟ್ಟ ವ್ಯಕ್ತಿ ಆತ್ಮಹತ್ಯೆಯಲ್ಲ- ಹೃದಯಾಘಾತದಿಂದ ಸಾವು

0
719

 

 

ಸುಳ್ಯ ಪರಿವಾರಕಾನದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ವ್ಯಕ್ತಿ ಯೊಬ್ಬರು ಹೃದಯಾಘಾತದಿಂದ ಮೃತ ಪಟ್ಟ ಘಟನೆ ಸೆ.21 ರಂದು ವರದಿಯಾಗಿದೆ.
ಪರಿವಾರಕಾನದ ಅಜೀಝ್ ಎಂಬವರ ಕಟ್ಟಡದಲ್ಲಿ ಬಾಡಿಗೆ ಕೋಣೆಯಲ್ಲಿ ಕಳೆದ 5 ವರ್ಷಗಳಿಂದ ವಾಸವಿದ್ದ ಕೊರಗಪ್ಪ ಭಂಡಾರಿಯವರು ಮೃತ ಪಟ್ಟವರೆಂದು ತಿಳಿದು ಬಂದಿದೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಮೃತರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಮದ್ಯ ವ್ಯಸನದ ಚಟವಿದ್ದು ಮೃತ ಪಟ್ಟ ದಿವಸ ಒಬ್ಬರೇ ಮನೆಯಲ್ಲಿದ್ದರು.
ಪ್ರತಿ ದಿನ ಬೆಳಗ್ಗೆ ಎದ್ದು ಕೆಲಸಕ್ಕೆ ‌ಹೋಗುತ್ತಿದ್ದ ವ್ಯಕ್ತಿ ಮಧ್ಯಾಹ್ನ ಕಳೆದರೂ ಬಾಗಿಲು ತರೆಯದ್ದರಿಂದ ಸಂಶಯಗೊಂಡ ಅಲ್ಲೇ ಪಕ್ಕದಲ್ಲಿ ವಾಸವಿರುವ ಮನೆಯ ಮಾಲಕರು ಕಿಟಕಿಯಲ್ಲಿ ಬಂದು ನೋಡಿದಾಗ ಕೊರಗಪ್ಪ ರವರು ಅರೆ ಬೆತ್ತಲೆಯಾಗಿ ಸೋಫಾದ ಮೇಲೆ ಬಿದ್ದಿದ್ದರು. ತಕ್ಷಣ ಪಂಚಾಯತ್ ಸದಸ್ಯ ಸುದೇಶ ಮತ್ತು ಸ್ಥಳೀಯ ರಾದ ಜಗದೀಶ್ ಸರಳಿಕುಂಜ ರವರಿಗೆ ವಿಷಯ ತಿಳಿಸಿದರು.ಅವರು ತಕ್ಷಣ ಸ್ಥಳಕ್ಕೆ ಬಂದು ಮೃತ ಪಟ್ಟಿರುವ ಬಗ್ಗೆ ಸುಳ್ಯ ಪೋಲೀಸರಿಗೆ ವಿಷಯ ತಿಳಿಸಿದರು. ಕೋಣೆಯ
ಬಾಗಿಲು ಚಿಲಕ ಹಾಕಿಕೊಂಡಿದ್ದುದರಿಂದ ಹೊರಗಿನಿಂದ ಕಿಟಕಿ ಯಲ್ಲಿ ನೋಡಿದಾಗ ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡ ಹಾಗೆ ಕಂಡು ಬಂದ ಕಾರಣದಿಂದ ಸೇರಿದವರೆಲ್ಲರೂ ಆತ್ಮ ಹತ್ಯೆಎಂದು ಮಾತನಾಡತೊಡಗಿದರು. ಪೋಲಿಸರು ಸ್ಥಳಕ್ಕಾಗಮಿಸಿದ ಬಳಿಕ ಮೃತರ ಮಗನ ಸಮ್ಮುಖದಲ್ಲಿ ಬಾಗಿಲು ತೆರದು ಒಳ ಹೋಗಿ ಮಹಜರು ನಡೆಸಿ ಪೋಸ್ಟ್ ಮಾರ್ಟಂ ಗೆ ಶವವನ್ನು ಅಂಬ್ಯುಲೆನ್ಸ್ ನಲ್ಲಿ ಸರಕಾರಿ ಆಸ್ಪತ್ರಗೆ ಕಳುಹಿಸಲಾಯಿತು. ಪೋಸ್ಟ್ ಮಾರ್ಟಂ ವರದಿ ಪ್ರಕಾರ ವಿಪರೀತ ಮದ್ಯ ಸೇವಿಸಿದ ಕಾರಣದಿಂದ ಹೃದಯಾಘಾತಕ್ಕೊಳಪಟ್ಟು ಮೃತ ಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಮೃತರು ಪತ್ನಿ ಶ್ರೀಮತಿ ಚಂದ್ರಕಲಾ, ಓರ್ವ ಪುತ್ರ ನವೀನ್, ಪುತ್ರಿಯರಾದ ಶ್ರೀಮತಿ ವಿದ್ಯಾ, ಶ್ರೀಮತಿ ಜಸ್ಮಿತಾ ಮತ್ತು ಅಳಿಯಂದಿರನ್ನು, ಸಹೋದರರನ್ನು, ಮೊಮ್ಮಕ್ಕಳನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here