ಮಡಪ್ಪಾಡಿ : ದಿವಾಕರ ಪೂಂಬಾಡಿ ಹೃದಯಾಘಾತದಿಂದ ನಿಧನ

0
815

 

ಮಡಪ್ಪಾಡಿ ಗ್ರಾಮದ ಪೂಂಬಾಡಿ ದಿವಾಕರ ಎಂಬವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 60 ವರ್ಷ ಪ್ರಾಯವಾಗಿತ್ತು.
ಮೃತರು ಓರ್ವ ಪುತ್ರ ವಿಜೇತ್, ಪುತ್ರಿಯರಾದ ಶ್ರೀ ಮತಿ ಸೌಮ್ಯ, ಶ್ರೀಮತಿ ಗೀತಾ, ಶೀಲಾ ಹಾಗೂ ಸಹೋದರ ಜಯಪ್ರಕಾಶ್ ಪೂಂಬಾಡಿ, ಸಹೋದರಿಯರಾದ ಜಲಜಾಕ್ಷಿ, ಕೋಮಲಾಂಗಿಯರನ್ನು ಅಗಲಿದ್ದಾರೆ.
ದಿವಾಕರರವರು ಕಳೆದ ೩ ವರ್ಷಗಳಿಂದ ಬೆನ್ನುನೋವಿನಿಂದ ಬಳಲುತ್ತಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.
ದಿವಾಕರರು ಪೂಂಬಾಡಿ ಕುಟುಂಬದ ದೈವಗಳ ಪೂಜಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here