ಕೂಜುಗೋಡು ಕಟ್ಟೆಮನೆ ತರವಾಡು ಟ್ರಸ್ಟ್ ಅಸ್ತಿತ್ವಕ್ಕೆ

0

 

 

ಗೌರವಾಧ್ಯಕ್ಷರಾಗಿ – ಪದ್ಮಯ್ಯ ಗೌಡ ಕೆ.
ಪೋಷಕಾಧ್ಯಕ್ಷರಾಗಿ –
 ಸುಧೀರ್ ಕೆ.ವಿ. ಅಧ್ಯಕ್ಷರಾಗಿ-
ಡಾ. ಪುರುಷೋತ್ತಮ ಕೆ.ಜಿ. ಪ್ರಧಾನ ಕಾರ್ಯದರ್ಶಿಗಳಾಗಿ – ಡಾ. ಸೋಮಶೇಖರ್ ಕೆ ಎಲ್.
ಖಜಾಂಜಿಗಳಾಗಿ – ಲೋಕೇಶ್ ಕೆ.ಎಸ್.

 

ಬಾಳುಗೋಡು ಮತ್ತು ಐನೆಕಿದು ಗ್ರಾಮಗಳಲ್ಲಿ ಹತ್ತು ಕುಟುಂಬ 18 ಗೋತ್ರದ ಜನಾಂಗದಲ್ಲಿ ಗುರುತಿಸಿಕೊಂಡು ಸ್ವ – ಜಾತಿ ಸಮಾಜದಲ್ಲಿ ತಮ್ಮದೇ ಛಾಪು ಮೂಡಿಸಿಕೊಂಡ ಪ್ರತಿಷ್ಠಿತ ಕೂಜಗೋಡು ಕಟ್ಟೆಮನೆ ಕುಟುಂಬಸ್ಥರು ಪೂರ್ವ ಸಂಪ್ರದಾಯಗಳ ಪುನರಾವರ್ತನೆ, ಆಚಾರ ವಿಚಾರಗಳನ್ನು ಉಳಿಸಿ – ಬೆಳೆಸಿ ಮುಂದಿನ ಪೀಳಿಗೆಗೆ ವಿಸ್ತರಿಸುವ ಸಲುವಾಗಿ 15 ಮಂದಿ ಕುಟುಂಬ ಸದಸ್ಯರನ್ನು ಒಳಗೊಂಡ “ಕೂಜುಗೋಡು ಕಟ್ಟೆಮನೆ ತರವಾಡು ಟ್ರಸ್ಟ್” ಎಂಬ ಹೆಸರಿನಲ್ಲಿ ಕುಟುಂಬಸ್ಥರ ವಿಶ್ವಸ್ಥ ಮಂಡಳಿಯನ್ನು ನೂತನವಾಗಿ ರಚಿಸಿ ನೋಂದಾಯಿಸಿದ್ದಾರೆ. ಟ್ರಸ್ಟಿನ ಗೌರವಾಧ್ಯಕ್ಷರಾಗಿ –  ಪದ್ಮಯ್ಯ ಗೌಡ ಕೆ., ಪೋಷಕಾಧ್ಯಕ್ಷರಾಗಿ – ಸುಧೀರ್ ಕೆ.ವಿ. ಅಧ್ಯಕ್ಷರಾಗಿ-
ಡಾI ಪುರುಷೋತ್ತಮ ಕೆ.ಜಿ. ಪ್ರಧಾನ ಕಾರ್ಯದರ್ಶಿಗಳಾಗಿ – ಡಾ. ಸೋಮಶೇಖರ್ ಕೆ ಎಲ್. , ಖಜಾಂಜಿಗಳಾಗಿ – ಲೋಕೇಶ್ ಕೆ.ಎಸ್., ಉಪಾಧ್ಯಕ್ಷರುಗಳಾಗಿ – ಹೊನ್ನಯ್ಯ ಗೌಡ ಕೆ.ಕೆ. ಶ್ರೀಮತಿ. ರೇಷ್ಮಾ ಪ್ರಕಾಶ್ ಜೊತೆ ಕಾರ್ಯದರ್ಶಿಗಳಾಗಿ – ಶ್ರೀಮತಿ. ನಿರ್ಮಲ ರಾಮಕೃಷ್ಣ ಕಾರ್ಯದರ್ಶಿಗಳಾಗಿ – ರಾಧಾಕೃಷ್ಣ ಕಟ್ಟೆಮನೆ, ಗೌರವ ಸಲಹೆಗಾರರಾಗಿ – ನಾಗಪ್ಪ ಗೌಡ ಕೆ., ಹರೀಶ್ ಕೆ.ಎಂ., ಧರ್ಮಪಾಲ ಕೆ. ಎಸ್., ದಯಾನಂದ ಕೆ. ಎನ್. ಹಾಗೂ ಆಡಳಿತ ಮಂಡಳಿ ಸದಸ್ಯರುಗಳಾಗಿ ದಾಮೋದರ ಕೆ.ಎಸ್., ಕೆ. ವಿ. ನರಸಿಂಹ ಗೌಡ, ತೇಜಕುಮಾರ ಕೆ., ಗಧಾದರ ಕೆ.ಕೆ.
ಶ್ರೀಮತಿ ದಮಯಂತಿ ಮೋಹನ ಕೆ.ಎಂ., ಜಯರಾಮ ಕೆ.ಕೆ., ಶೈಲೇಶ್ ಕೆ.ಎಸ್., ಯತೀಶ್ ಕೆ. ಜೆ. ಇವರುಗಳು ಕೂಜುಗೋಡು ಕಟ್ಟೆಮನೆ ತರವಾಡು ಮನೆಯಲ್ಲಿ ನಡೆದ ಕುಟುಂಬ ಸದಸ್ಯರ ಸಾಮಾನ್ಯ ಸಭೆಯಲ್ಲಿ ಆಯ್ಕೆಯಾಗಿದ್ದಾರೆ.