ಸಂಚಾರ ನಿಯಂತ್ರಕ ಗೋಪಾಲಕೃಷ್ಣ ದೇವಸ್ಯರಿಗೆ ಸುಬ್ರಹ್ಮಣ್ಯದಲ್ಲಿ ಸನ್ಮಾನ ಮತ್ತು ಬೀಳ್ಕೊಡುಗೆ

0

 

 

ಸುಬ್ರಹ್ಮಣ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಗೋಪಾಲಕೃಷ್ಣ ದೇವಸ್ಯರಿಗೆ ಸುಬ್ರಹ್ಮಣ್ಯ ನಿಲ್ದಾಣದ ಸಂಚಾರ ನಿಯಂತ್ರಕರು ಮತ್ತು ಸಿಬ್ಬಂದಿ ವರ್ಗ , ನಿಲ್ದಾಣ ಲಗ್ಗೇಜು ಕೊಠಡಿ ಮಾಲಕರು ಹಾಗೂ ನಿಲ್ದಾಣದಲ್ಲಿನ ಅಂಗಡಿ ಮಾಲಿಕರ ವತಿಯಿಂದ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅರ್ಚಕರಾದ ಕುಮಾರ ಬೈಪಾಡಿತ್ತಾಯ, ಸುಬ್ರಹ್ಮಣ್ಯ ದೇವಸ್ಥಾನದ ಶಿಷ್ಟಾಚಾರ ವಿಭಾಗದ ಅಧಿಕಾರಿಗಳಾದ ಗೋಪಿನಾಥ್, ಹರೀಶ್ ಕುಮಾರ್, ನಿವೃತ್ತ ಕೆ.ಎಸ್.ಆರ್.ಟಿ.ಸಿ ಸಂಚಾರ ನಿಯಂತ್ರಕರಾದ ಕೆ.ಎಸ್ ಸುಬ್ರಹ್ಮಣ್ಯ ಭಟ್, ನಿವೃತ್ತ ಚಾಲಕ ಗಿರಿಧರ ಉಪ್ಪಳಿಕೆ, ಲಗೇಜು ಕೊಠಡಿ ಮಾಲಕ ಮನೋಜ್ ಕುಮಾರ್, ನಿಲ್ದಾಣದ ಅಂಗಡಿ ಮಾಲಕ ಈಶ್ವರ್, ನಿಲ್ದಾಣಾಧಿಕಾರಿ ವೇಣುಗೋಪಾಲ್, ಸಂಚಾರ ನಿಯಂತ್ರಕರಾದ ಪಾಲಾಕ್ಷ ಮೂರ್ತಿ, ಅಬ್ಬಾಸ್, ಪುಟ್ಟಣ್ಣ ಗೌಡ, ಭರತ್ ಕೆ.ಎಂ, ಭಾಸ್ಕರ್ ಶೆಟ್ಟಿ, ಗೃಹರಕ್ಷಕ ದಳದ ಮುಖ್ಯಸ್ಥ ಹರೀಶ್, ಅಭಿಲಾಷ್, ಪ್ರಕಾಶ್, ರವಿಚಂದ್ರ, ನಿಲ್ದಾಣ ಸ್ವಚ್ಚತಾ ವಿಭಾಗದ ಸಿಬ್ಬಂದಿಗಳು, ಚಾಲಕರು, ನಿರ್ವಾಹಕರು ಉಪಸ್ಥಿತರಿದ್ದರು.