ಕೆಎಫ್‌ಡಿಸಿ ಕ್ವಾಟ್ರಸ್‌ನಲ್ಲಿ ಕಳ್ಳತನ : ಆರೋಪಿಯ ಬಂಧನ

0


ಕಳೆದ ೨ ತಿಂಗಳ ಹಿಂದೆ ಸುಳ್ಯ ಕುರುಂಜಿಭಾಗ್ ಕೆಎಫ್‌ಡಿಸಿ ಕ್ವಾಟ್ರಸ್‌ನಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ಕುಶಾಲನಗರದ ಗುಡ್ಡೆ ಹೊಸೂರು ಆನಂದ ಎಂಬಾತ ಕಳ್ಳತನ ಮಾಡಿ ಕೇರಳಕ್ಕೆ ಪಲಾಯನ ಮಾಡಿದ್ದ. ಇದೀಗ ಸುಳ್ಯ ಪೊಲೀಸರು ಆತನನ್ನು ಹಿಡಿದು ಸುಳ್ಯ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಕಾರ್ಯಾಚರಣೆಯಲ್ಲಿ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಸರಸ್ವತಿ ಬಿ.ಟಿ., ಹೆಡ್‌ಕಾನ್‌ಸ್ಟೇಬಲ್‌ಗಳಾದ ಉದಯ ಗೌಡ, ಉದಯಕುಮಾರ್, ಕಾನ್‌ಸ್ಟೇಬಲ್‌ಗಳಾದ ಅನಿಲ್, ದಿನೇಶ್, ಅನುಕುಮಾರ್ ಪಾಲ್ಗೊಂಡಿದ್ದರು.