ಮುರುಳ್ಯ ಶಾಲೆಯಲ್ಲಿ ಚಿಗುರು ಹಿರಿಯ ವಿದ್ಯಾರ್ಥಿಗಳ ಸಭೆ

0


ಸ.ಹಿ. ಪ್ರಾ. ಮುರುಳ್ಯ ಶಾಲಾ ಚಿಗುರು ಹಿರಿಯ ವಿದ್ಯಾರ್ಥಿಗಳ ಸಭೆಯನ್ನು ಜೂ. ೨೨ರಂದು ನಡೆಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಕೆ. ನೂಜಾಡಿಯವರ ಅಧ್ಯಕ್ಷತೆಯಲ್ಲಿ ನೂತನ ಸಂಘವನ್ನು ರಚನೆ ಮಾಡಲಾಯಿತು.

ಅಧ್ಯಕ್ಷರಾಗಿ ಶರತ್ ಕುಮಾರ್ ಅಲೆಕ್ಕಾಡಿ, ಉಪಾಧ್ಯಕ್ಷರಾಗಿ ಸುಮಂತ್ ಅಲೆಕ್ಕಾಡಿ, ಕಾರ್ಯದರ್ಶಿಯಾಗಿ ಪೃಥ್ವಿ ರೈ ಆಯ್ಕೆಯಾದರು. ಪದಾಧಿಕಾರಿಗಳಾಗಿ ಜಯಪ್ರಕಾಶ್ ಮದಿಪು, ವಸಂತ ಪೂದೆ, ಆನಂದ ಅಲೆಕ್ಕಾಡಿ, ಅಸ್ತಿಕ್ ಬೊಳ್ಕಜೆ, ಧನುಷ್, ಪ್ರದೀಪ್ ಕರಿಂಬಿಲ, ಪ್ರಜ್ವಲ್ ,ರಾಕೇಶ್, ಸಂತೋಷ್ ಪರಪ್ಪು, ಆಯ್ಕೆಯಾದರು. ಶಾಲಾ ಮುಖ್ಯ ಗುರುಗಳು, ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.