ಕೊಯನಾಡು ಶಾಲೆಯ ಬರೆ ಜರಿತ : ಪರಿಶೀಲಿಸಲು ವಿರಾಜಪೇಟೆ ಶಾಸಕರಿಗೆ ಮನವಿ

0


ಮೊನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಕೊಯನಾಡು ಶಾಲೆಯ ಹಿಂಬದಿ ಬರೆ ಜರಿದಿದ್ದು, ಶಾಲಾ ಕೊಠಡಿಗೆ ಹಾನಿಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಶಾಸಕರು ತಕ್ಷಣ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಕೊಡಲೇ ಪರಿಶೀಲಿಸಬೇಕಾಗಿ ಆದೇಶ ನೀಡಿದರು. ಜಿಲ್ಲಾ ಶಿಕ್ಷಣಾಧಿಕಾರಿಗಳು ಅಧಿಕಾರಿಗಳಿಗೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಪೂರ್ಣ ಮಾಹಿತಿ ನೀಡಿಬೇಕಾಗಿ ಆದೇಶ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹನೀಫ್ ಎಸ್.ಪಿ., ಸಾಮಾಜಿಕ ಹೋರಾಟಗಾರ ಮತ್ತು ಪ್ಲಾಂಟರ್ ಅಪ್ಪಣ್ಣ, ಪುರುಷೋತ್ತಮ ಕಾಡುಮನೆ, ನಸೀರ್ ಮಾಡಶೇರಿ ಇದ್ದರು.