ಸುಳ್ಯ ದಸರಾ ಉತ್ಸವದಲ್ಲಿ ಎಂ.ಬಿ ಚಾರಿಟೇಬಲ್ ಟ್ರಸ್ಟ್ ಸಂಚಾಲಕರಿಗೆ ಸನ್ಮಾನ

0

 

ಶ್ರೀ ಶಾರದಾಂಬಾ ದಸರಾ ಸೇವಾಟ್ರಸ್ಟ್ ,ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ,ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ನಡೆಯುತ್ತಿರುವ ದಸರಾ ಉತ್ಸವದ 7 ನೇಯ ದಿನದ ಸಭಾ ಕಾರ್ಯಕ್ರಮದಲ್ಲಿ ಸುಳ್ಯದ ಎಂ.ಬಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಎಂ.ಬಿ. ಸದಾಶಿವ ಮತ್ತು ಸಂಚಾಲಕಿ ಶ್ರೀಮತಿ ಹರಿಣಿ ಸದಾಶಿವ ದಂಪತಿಯನ್ನು ಜಂಟಿ ಸಮಿತಿಯ ವತಿಯಿಂದ ಅ.8 ರಂದು ಸನ್ಮಾನಿಸಲಾಯಿತು.

ಎಸ್‌.6 ಗೌರವಾಧ್ಯಕ್ಷ ಕೆ.ಗೋಕುಲ್ ದಾಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಶಿವರಾಮ ಕೇರ್ಪಳ ಉಪಸ್ಥಿತರಿದ್ದರು. ಎಸ್.6 ಅಧ್ಯಕ್ಷ ಚಿದಾನಂದ ವಿದ್ಯಾನಗರ, ಟ್ರಸ್ಟ್ ಉಪಾಧ್ಯಕ್ಷ ಬೂಡು ರಾಧಾಕೃಷ್ಣ ರೈ ,ಸಮಿತಿ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲ ಬೈಲು ವೇದಿಕೆಯಲ್ಲಿದ್ದರು.
ಗೋಕುಲ್ ದಾಸ್ ಕೆ ಪ್ರಾಸ್ತಾವಿಕ ಮಾತನಾಡಿದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿದರು. ರವಿಚಂದ್ರ ಕೆ ವಂದಿಸಿದರು.