ಅ.15 – 22 : ಸುಳ್ಯದ ಎನ್ನೆಂಸಿಯಲ್ಲಿ ಆರ್.ಡಿ. ಪೆರೇಡ್ ಗೆ ಆಯ್ಕೆ ಶಿಬಿರ

0

 

೨೦೨೩ರ ಜನವರಿ ೨೬ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಎನ್‌ಸಿಸಿ ಕರ್ನಾಟಕ ತಂಡದ ಆಯ್ಕೆಗಾಗಿ ಒಂದು ವಾರಗಳ ಶಿಬಿರ ಅ.೧೫ರಿಂದ ೨೨ರವರೆಗೆ ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜು ನೆತೃತ್ವದಲ್ಲಿ ನಡೆಯಲಿದೆ ಎಂದು ಎನ್ನೆಂಸಿ ಪ್ರಾಂಶುಪಾಲರಾದ ಎಂ.ಎಂ. ರುದ್ರಕುಮಾರ್ ತಿಳಿಸಿದ್ದಾರೆ.
ಮಂಗಳೂರು ಗ್ರೂಪ್‌ನಿಂದ ೧೯ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಮಡಿಕೇರಿ ಇಲ್ಲಿಯ ಎನ್.ಸಿ.ಸಿ. ವಿದ್ಯಾರ್ಥಿಗಳ ತಂಡದ ಆಯ್ಕೆಗಾಗಿ ಎರಡನೇ ಶಿಬಿರ ನಡೆಯುತ್ತಿದ್ದು, ಸುಳ್ಯದಲ್ಲಿ ಈ ಶಿಬಿರ ಪ್ರಥಮ ಬಾರಿಗೆ ನಡೆಯುತ್ತಿದೆ. ಮಂಗಳೂರು ಬೆಟಾಲಿಯನ್‌ಗೊಳಪಡುವ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಮತ್ತು ಮಡಿಕೇರಿ ವ್ಯಾಪ್ತಿಯ ಕಾಲೇಜುಗಳ ಒಟ್ಟು ೪೨೫ ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.