ಅ. 15-22 : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಪ್ರಥಮ ಬಾರಿಗೆ ಎನ್ ಸಿಸಿ ಕ್ಯಾಂಪ್

0

 

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಅಕ್ಟೋಬರ್ 15 ರಿಂದ 22 ರ ತನಕ R D C -2 ಟ್ರೈನಿಂಗ್ ಮತ್ತು ಸೆಲೆಕ್ಷನ್ ಹಾಗೂ C A T C ಕ್ಯಾಂಪ್ ನಡೆಯಲಿದೆ. ಮಂಗಳೂರು ಗ್ರೂಪ್ ನ ಅಡಿಯಲ್ಲಿ ಬರುವ ಮಂಗಳೂರು, ಮಡಿಕೇರಿ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ವಿವಿಧ NCC ಘಟಕಗಳ 425 ಎನ್ ಸಿಸಿ ಕೆಡೆಟ್ ಗಳು ಕ್ಯಾಂಪಿನಲ್ಲಿ ಭಾಗವಹಿಸಲಿದ್ದಾರೆ ಪ್ರಸ್ತುತ ನಡೆಯಲಿರುವ ಈ ಕ್ಯಾಂಪ್ ಮಂಗಳೂರು ಗ್ರೂಪ್ ನ ಕಮಾಂಡರ್ ಹಾಗೂ 19 KAR. BN.NCC ಮಡಿಕೇರಿ ಇದರ ಕಮಾಂಡಿಂಗ್ ಆಫೀಸರ್ ಕರ್ನಲ್ ಸುಪ್ರಿಂ ಗಿಲ್ಬರ್ಟ್ ಆರೋನ ಇವರ ನೇತೃತ್ವದಲ್ಲಿ ನಡೆಯಲಿದೆ ಈ ಕ್ಯಾಂಪ್ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿರುವರು. ಕ್ಯಾಂಪಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ,ANO ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here