ಬಿ ಜೆ ಪಿ ರಾಜ್ಯಾಧ್ಯಕ್ಷರಿಂದ ಪೆರುವಾಜೆ ಮುಕ್ಕೂರು ಶಾಲಾ ಕಾಮಗಾರಿ ವೀಕ್ಷಣೆ

0

 

 

ಪೆರುವಾಜೆ ಗ್ರಾಮದ ಮುಕ್ಕೂರು ದ. ಕ. ಜಿ. ಪ. ಹಿರಿಯ ಪ್ರಾಥಮಿಕ ಶಾಲೆಗೆ ಮೆಟ್ರೋನೆಟ್ ಪ್ರೈವೇಟ್ ಕಂಪನಿ ಯವರಿಂದ ರೂ 23 ಲಕ್ಷ ಹಣ ಮಂಜೂರಾಗಿದ್ದು. ಇದರ ಕಾಮಗಾರಿ ವೀಕ್ಷಣೆಯನ್ನು ಮಂಗಳೂರು ಸಂಸದರು ಹಾಗೂ ಬಿ. ಜೆ. ಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ತಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ, ಪೆರ್ವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮೊಕ್ತೇಸರ ಕುಶಾಲಪ್ಪ ಪೆರುವಾಜೆ, ಮುಕ್ಕೂರು ಹಾಲು ಉತ್ಪದಕರ ಸಹಕಾರಿ ಸಂಘದ ಅಧ್ಯಕ್ಷ ದಯಾಕರ ಆಳ್ವ, ಮುಕ್ಕೂರು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ್ ರೈ ಕುಂಜಾಡಿ, ವಕೀಲರಾದ ಗಣಪತಿ ಭಟ್ ನೀರ್ಕಜೆ, ಡಾ|ರಾಮ್ ಕಿಶೋರ್ ಕಾನಾವು, ಪವನ್, ಸುಬ್ರಾಯ ಭಟ್ ನೀರ್ಕಜೆ,ದಯಾನಂದ ರೈ ಕನ್ನೆಜಾಲು, ಜಲದುರ್ಗದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಗೌಡ ಕೊಂಡೆಪ್ಪಾಡಿ, ಪೆರ್ವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ದಯಾನಂದ ಗೌಡ ಜಾಲು, ಜ್ಯೋತಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ, ಪೆರುವಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಚನಿಯ ಕುಂಡಡ್ಕ,ಬಿ.ಜೆ.ಪಿ ಬೂತ್ ಸಮಿತಿಯ ಅಧ್ಯಕ್ಷ ರೂಪನಂದ ತಂಗುಮೂಲೆ,ಮತ್ತು ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು.