ಉದ್ಯೋಗ ಮೇಳದಲ್ಲಿ ನಿಂತಿಕಲ್ಲು ಐಟಿಐನ 43 ವಿದ್ಯಾರ್ಥಿಗಳು ಆಯ್ಕೆ

0


ಸುಳ್ಯದ ಶಾಸಕರಾದ ಎಸ್ ಅಂಗಾರ ಇವರ ನೇತೃತ್ವದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಕೇಂದ್ರದ ವಿವಿಧ ವೃತ್ತಿ ವಿಭಾಗದ 43 ವಿದ್ಯಾರ್ಥಿಗಳು ಹೋಂಡಾ ಮೋಟರ್ಸ್ ಹಾಗೂ Wistron ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸ್ಕಿಲ್ ಇಂಡಿಯಾ ಇದರ ಜಂಟಿ ನಿರ್ದೇಶಕರು ಹಾಗೂ ಜಿಲ್ಲಾ ಸಂಯೋಜಕರಾದ ರೋಹಿತ್ ಹಾಗೂ ಕಾಲೇಜಿನ ಉದ್ಯೋಗ ನೇಮಕಾತಿ ಅಧಿಕಾರಿ ಶೇಖರ್ ಕುದ್ದಾಜೆ, ಉಪನ್ಯಾಸಕರಾದ ಪ್ರಜ್ವಲ್ ಹಾಗೂ ರೂಪ ಪಿ .ಜೆ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.