ಚರ್ಮಗಂಟು ರೋಗ : ತಾಲೂಕಿನಲ್ಲಿ 530 ಪ್ರಕರಣ ಪತ್ತೆ

0

ಜಾನುವಾರು ಸಾಗಾಟಕ್ಕೆ ನಿರ್ಬಂಧ

ಸುಳ್ಯ ತಾಲೂಕಿನಲ್ಲಿ ಇದುವರೆಗೆ 530 ಜಾನುವಾರುಗಳಲ್ಲಿ ಚರ್ಮಗಂಟು ರೋಗ ಪತ್ತೆಯಾಗಿದೆ. ಪ್ರಕರಣ ಹೆಚ್ಚಿರುವುದರಿಂದ ಜಾನುವಾರುಗಳ ಸಾಗಾಟಕ್ಕೆ ನಿರ್ಬಂಧ ಹೇರಳಲಾಗಿದೆ ಎಂದು ಸುಳ್ಯ ಪಶು ಸಂಗೋಪನಾ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ. ನಿತೀನ್ ಪ್ರಭು ಹೇಳಿದ್ದಾರೆ.

ಜ.9 ರಂದು ಜಾಲ್ಸೂರು ಗ್ರಾಮ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

530 ಪ್ರಕರಣಗಳಲ್ಲಿ 129 ಗೋವುಗಳಿಗೆ ಗುಣಮುಖವಾಗಿದೆ. ಉಳಿದವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಐವರ್ನಾಡಿನಲ್ಲಿ ಒಂದು ಹಸು ಸಾವಿಗೀಡಾಗಿದೆ ಎಂದು ಹೇಳಿದರು.

ಜಾನುವಾರುಗಳನ್ನು ಸಾಗಾಟಕ್ಕೆ ಸಂಪೂರ್ಣ ನಿರ್ಬಂಧ ಹಾಕಲಾಗಿದೆ. ಆದ್ದರಿಂದ ಯಾರೂ ಸಾಗಾಟ ಮಾಡಬಾರದು. ಹಾಗೊಂದು ವೇಳೆ ಸಾಗಾಟ ಮಾಡಿದರೆ ಹುಷಾರಿದ್ದ ಜಾನುವಾರುಗಳಿಗೆ ರೋಗ ಹರಡುವ ಸಾಧ್ಯತೆ ಇದೆ ಎಂದು ಹೇಳಿದರು. ಸೊಳ್ಳೆ ಮತ್ತು ನೊಣಗಳಿಂದ ರೋಗ ಹರಡುತ್ತದೆ ಆದ್ದರಿಂದ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದ ಅವರು ಚರ್ಮಗಂಟು ರೋಗ ದ ಜಾನುವಾರಿನ ಹಾಲು ಕುಡಿಯುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದವರು ಹೇಳಿದರು.