ಐವರ್ನಾಡು ಗ್ರಾಮ ಪಂಚಾಯತ್ ಗ್ರಾಮ ಸಭೆ

0

ಚಳ್ಳತ್ತಡಿ ಸೇತುವೆ,ರಸ್ತೆ ಅಭಿವೃದ್ಧಿ ಬಗ್ಗೆ ಚರ್ಚೆ

ಐವರ್ನಾಡು ಗ್ರಾಮ ಪಂಚಾಯತ್ “ಸಬ್ ಕಿ ಯೋಜನಾ ಸಬ್ ಕಾ ವಿಕಾಸ್” ಧ್ಯೇಯವಾಕ್ಯದಲ್ಲಿ ಗ್ರಾಮ ಪಂಚಾಯತ್ ದೂರದೃಷ್ಟಿ ಯೋಜನಾ ತಯಾರಿಕೆ ಹಾಗೂ ,2022-23 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿಯವರ ಅಧ್ಯಕ್ಷತೆಯಲ್ಲಿ ಜ.11 ರಂದು ಗ್ರಾಮ ವಿಕಾಸ ಸಭಾಭವನದಲ್ಲಿ ನಡೆಯಿತು.


ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಶ್ರೀಮತಿ ಸುಹಾನರವರು ನೋಡೆಲ್ ಅಧಿಕಾರಿಯಾಗಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಜಬಳೆ, ರಂಜನ್ ಮೂಲೆತೋಟ, ದೇವಿಪ್ರಸಾದ್ ಎಸ್.ಎನ್, ಶ್ರೀಮತಿ ಶಶಿಕಲಾ ಕುಳ್ಳಂಪಾಡಿ, ಶ್ರೀಮತಿ ಚಂದ್ರಕಲಾ ಜಬಳೆ, ಶ್ರೀಮತಿ ಮಮತಾ ಉದ್ದಂಪಾಡಿ, ನಳಿನಿ ಕೋಡ್ತೀಲು ಶ್ರೀಮತಿ ಲೀಲಾವತಿ ಉಪಸ್ಥಿತರಿದ್ದರು.


ಮಮತ ಉದ್ದಂಪಾಡಿ,ಅಮಿತ,ಸುಮಿತ್ರರವರು ಪ್ರಾರ್ಥಿಸಿದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.