ಸುಳ್ಯದಲ್ಲಿ ನಡೆಯುತ್ತಿದ್ದ ‘ವಿಶಿಷ್ಟ’ ಆರಾಧನೆಯೊಂದರ ಒಳನೋಟ ಒದಗಿಸುವ ಕನ್ನಡ ಕೃತಿಯ ಗೌರವ ಪ್ರತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಹಸ್ತಾಂತರ

0

ಕೇಂದ್ರ ಸಾಹಿತ್ಯ ಅಕಾಡೆಮಿ (ನ್ಯಾಷನಲ್ ಅಕಾಡೆಮಿ ಆಫ್ ಲೆಟರ್ಸ್) ಇಲ್ಲಿಗೆ, ಯುವ ಲೇಖಕ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ರಚಿಸಿದ ‘ಸತ್ಯವೇ ಆರಿಸಿಕೊಂಡ ಸತ್ಯ ದರ್ಶನ’ ಕನ್ನಡ ಕೃತಿಯ ಗೌರವ ಪ್ರತಿಗಳನ್ನು ಹಸ್ತಾಂತರಿಸಲಾಯಿತು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಸೆಕ್ರೇಟರಿ ಡಾ| ಕೆ. ಶ್ರೀನಿವಾಸರಾವ್, ಗೌರವ ಪ್ರತಿಗಳನ್ನು ಅಕಾಡೆಮಿ ಕಛೇರಿಯಲ್ಲಿ ಸ್ವೀಕಾರ ಮಾಡಿ, ಅಭಿನಂದಿಸಿದರು.

2024ರ ಮಾರ್ಚ್ ತಿಂಗಳಿನಲ್ಲಿ ಸುಳ್ಯದ ಐವರ್ನಾಡಿನ ನಿಡುಬೆ ಬರಮೇಲು ತರವಾಡು ಮನೆಯಲ್ಲಿ ಏರ್ಪಡಿಸಿದ್ದ ಸಮಾರಂಭ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡ ಕನ್ನಡ ಕೃತಿಯು ತುಳುನಾಡಿನ ವಿಶಿಷ್ಟವಾದ ದಲಿಯ ಆರಾಧನಾ ಪದ್ಧತಿ – ಅದನ್ನೊಳಗೊಂಡಂತೆ ಸುಳ್ಯ ಪರಿಸರ ಹಾಗೂ ಇಲ್ಲಿನ ಕುಮಾರ ಸಂಕಪ್ಪಣ್ಣ (ದಿ| ಸಂಕಪ್ಪ ಗೌಡ ನಿಡುಬೆ ಬರಮೇಲು) ಅವರು ನಡೆಸಿಕೊಂಡಿದ್ದ ಈ ಆರಾಧನೆಯ ಒಳನೋಟವನ್ನು ಒದಗಿಸುತ್ತದೆ.

ಸುಳ್ಯ ಪರಿಸರ ಮತ್ತು ದಲಿಯ ಆರಾಧನೆ, ಈ ವಿಚಾರದ ಒಟ್ಟು ದಾಖಲೀಕರಣ ಪ್ರಸ್ತುತಿಯಲ್ಲಿ ಜಯರಾಜ್ ಗೌಡ ನಿಡುಬೆ ಮುಂದಾಳತ್ವ ವಹಿಸಿದ್ದು, ಹಿರಿಯರಾದ ಕೃಷ್ಣಪ್ಪ ಗೌಡ ನಿಡುಬೆ ಬರಮೇಲು (ಕುಮಾರ ಸಂಕಪ್ಪಣ್ಣ ಅವರ ಪುತ್ರ) ಅವರು ತಮ್ಮ ಮಾರ್ಗದರ್ಶನ ನೀಡಿದ್ದಾರೆ.