ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗಣರಾಜ್ಯೋತ್ಸವ ಆಚರಣೆ

0

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗಣರಾಜ್ಯೋತ್ಸವ ಆಚರಣೆ ಜ.26 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಲಕ್ಷ್ಮಣ ಗೌಡ ಬೇರ್ಯ ಧ್ವಜಾರೋಹಣ ಗೈದು ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಗಣೇಶ್ ಪೈ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ ಸಿ ಮತ್ತು ಸುಬ್ರಹ್ಮಣ್ಯ ಕುಳ ಭಾಷಣ ಮಾಡಿದರು. ನಿರ್ದೇಶಕರಾದ ಲಿಗೋಧರ ಆಚಾರ್ಯ, ಚಿನ್ನಪ್ಪ ಗೌಡ ಚೊಟ್ಟೆಮಜಲು ಶ್ರೀಕೃಷ್ಣ ಭಟ್ ಪಟೋಳಿ , ಸಂಘದ ಸಿಬ್ಬಂದಿಗಳು , ಊರವರು ಉಪಸಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೇಮಿರಾಜ ಪಲ್ಲೋಡಿ ಸ್ವಾಗತಿಸಿದರು. ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು. ಲೋಹಿತ್ ಎಣ್ಣೆಮಜಲು ಕಮಾಂಡ್ ನಿರ್ವಹಿಸಿದರು. ಪೂವಪ್ಪ ಚಿದ್ಗಲ್ ವಂದಿಸಿದರು.