ಆಲೆಟ್ಟಿ ಸದಾಶಿವ ದೇವರ ಜಾತ್ರೋತ್ಸವ- ಧಾರ್ಮಿಕ ಸಭೆ, *ನೂತನ ಸಭಾಭವನದ ಶಿಲಾನ್ಯಾಸ -ಯಕ್ಷಗಾನ ಬಯಲಾಟ

0

ಆಲೆಟ್ಟಿ ಶ್ರೀ ಸದಾಶಿವ ದೇವರ ಜಾತ್ರೋತ್ಸವದ ಆರಂಭದ ದಿನದಂದು ಸಂಜೆ ತಂತ್ರಿಯವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆದು ದೇವರ ನಿತ್ಯ ಬಲಿ ಉತ್ಸವವಾಗಿ ಪೂಜೆಯು ಜರುಗಿತು.

ಬಳಿಕ ಧಾರ್ಮಿಕ ಸಭೆ ಹಾಗೂ ನೂತನ ಸಭಾಭವನದ ಶಿಲಾನ್ಯಾಸ ಕಾರ್ಯಕ್ರಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರ ಅಧ್ಯಕ್ಷತೆಯಲ್ಲಿ ಫೆ.14 ರಂದು ನಡೆಯಿತು. ಈ ಸಂದರ್ಭದಲ್ಲಿ ದೇವಾಲಯಕ್ಕೆ ನಿರ್ಮಾಣ ಗೊಳ್ಳಲಿರುವ ಸಭಾಭವನದ ಶಿಲಾನ್ಯಾಸವನ್ನು ಬೆಂಗಳೂರು ಜನಸೇವಾ ಟ್ರಸ್ಟಿನ ಪ್ರಧಾನಕಾರ್ಯದರ್ಶಿಎ.ಎಸ್.ನಿರ್ಮಲ್ ಕುಮಾರ್ ರವರು ನೆರವೇರಿಸಿದರು.

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜೀ.ಸ.ಅಧ್ಯಕ್ಷ ಪಿ.ಬಿ.ದಿವಾಕರ ರೈ ದೀಪ ಪ್ರಜ್ವಲಿಸಿದರು. ವೇದಿಕೆಯಲ್ಲಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಕುಡೆಕಲ್ಲು, ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ,ಜೀ.ಸ.ಅಧ್ಯಕ್ಷ ಎನ್.ಎ.ರಾಮಚಂದ್ರ, ಸೇ.ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ ನಾಗಪಟ್ಟಣ ಸದಾಶಿವ ದೇವಸ್ಥಾನದ ವ್ಯ.ಸ.ಅಧ್ಯಕ್ಷ ದಿನೇಶ್ ಕೋಲ್ಚಾರು, ಧಾರ್ಮಿಕ ಚಿಂತಕ ರೊ. ಗಿರಿಜಾ ಶಂಕರ ತುದಿಯಡ್ಕ, ಆಲೆಟ್ಟಿ ಸೊಸೈಟಿ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಎ.ಪಿ.ಎಂ.ಸಿನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ದೇವಸ್ಥಾನದ ವ್ಯ.ಸ.ಸದಸ್ಯರಾದ ಅಚ್ಚುತ ಮಣಿಯಾಣಿ ಆಲೆಟ್ಟಿ, ಜಗದೀಶ್ ಸರಳಿಕುಂಜ, ಸತೀಶ್ ಕುಂಭಕ್ಕೋಡು, ಹರಿಪ್ರಸಾದ್ ಕಾಪುಮಲೆ, ಹರಿಪ್ರಸಾದ್ ಗಬ್ಬಲ್ಕಜೆ, ಶ್ರೀಮತಿ ಮಮತಾ ನಾರ್ಕೋಡು, ಶ್ರೀಮತಿ ನಳಿನಿ ರೈ ಆಲೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎ.ಎಸ್.ನಿರ್ಮಲಕುಮಾರ್ ರವರನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು.

ಕು.ಕೀರ್ತನಾ ಆಲೆಟ್ಟಿ ಪ್ರಾರ್ಥಿಸಿದರು. ಸೇ.ಸ.ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ಸ್ವಾಗತಿಸಿದರು. ಸೇ.ಸ.ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಯ.ಸ.ಸದಸ್ಯ ಸತೀಶ್ ಕುಂಭಕ್ಕೋಡು ವಂದಿಸಿದರು. ಭಜನಾ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದೇವಸ್ಥಾನದ ಸಮಿತಿಯ ಸದಸ್ಯರು ಹಾಗೂ ಭಜನಾ ಸಂಘದ ಸದಸ್ಯರು ಸಹಕರಿಸಿದರು.

ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅತಿಕಾಯ ಮೋಕ್ಷ-ಇಂದ್ರಜಿತ್ ಕಾಳಗ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಆಗಮಿಸಿದ ಸರ್ವರಿಗೂ ರಾತ್ರಿ ಅನ್ನ ಸಂತರ್ಪಣೆ ಯಾಯಿತು.