ಸುಳ್ಯದ ನಂದಾ ಇಲೆಕ್ಟ್ರಾನಿಕ್ಸ್ ಗಾಂಧಿನಗರ ಕರಾವಳಿ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭ

0

ಸುಳ್ಯದ ಕುರುಂಜಿಭಾಗ್ ನಲ್ಲಿ 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ನಂದಾ ಇಲೆಕ್ಟ್ರಾನಿಕ್ಸ್ ಗಾಂಧಿನಗರದ ಕರಾವಳಿ ಕಾಂಪ್ಲೆಕ್ಸ್ ಗೆ ಫೆ.15 ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಬೆಳಿಗ್ಗೆ ಗಣಹೋಮ ನಡೆಯಿತು.
ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ನೆಟ್ ಕಾಂ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ನಂದಾ ಇಲೆಕ್ಟ್ರಾನಿಕ್ಸ್ ಮಾಲಕ ಸತ್ಯಾನಂದ ಕೆ.ಸಿ, ಶ್ರೀಮತಿ ಗೀತಾ ಸತ್ಯಾನಂದ, ಕಟ್ಟಡ ಮಾಲಕ ಅಹಮ್ಮದ್ ಕರಾವಳಿ, ಶಿವಾನಂದ ಕುರುಂಜಿ,ಸೂರ್ಯಾನಂದ ಕುರುಂಜಿ, ಭಾಸ್ಜರ ಗೌಡ ಕುರುಂಜಿ, , ಶ್ರೀಮತಿ ಹರಿಣಿ ಸದಾನಂದ,ಚಾರ್ಲಿ ಚಾಕೋ, ಜಗದೀಶ್, ಮಧುರಾ ಜಗದೀಶ್,ಮೋಹನ್ ಎ.ಕೆ, ಹರಿಪ್ರಕಾಶ್ ಕುರುಂಜಿ,ಶಬೀರ್ ವಿಶ್ವಾಸ್ ಸೆಂಟರ್ ಮಾಲಕ ಜಯಪ್ರಕಾಶ್ ಕೆ.ವಿ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಸದಾನಂದ ಕುರುಂಜಿ ಸ್ವಾಗತಿಸಿ,ವಂದಿಸಿದರು.