ನುಸ್ರತ್ ವತಿಯಿಂದ ಮಹಿಳಾ ಮಯ್ಯತ್ ಪರಿಪಾಲನ ತರಬೇತಿ

0

ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ರಿ. ಎಲಿಮಲೆ ಇದರ ರೂಬಿ ಜ್ಯುಬಿಲಿ ಪ್ರಯುಕ್ತ 40 ಕಾರ್ಯಕ್ರಮಗಳ ಅಂಗವಾಗಿ ಮಹಿಳಾ ಮಯ್ಯತ್ ಪರಿಪಾಲನಾ ತರಬೇತಿ ಶಿಬಿರ ಹಾಗೂ ಸನ್ಮಾನ ಸಮಾರಂಭವು ಎಲಿಮಲೆ ನೂರುಲ್ ಹುದಾ ಮದ್ರಸದಲ್ಲಿ ಜರಗಿತು..
ಸಮಿತಿಯ ಉಪಾಧ್ಯಕ್ಷ ಸೂಫಿ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಸ್ಥಳೀಯ ಮುದರಿಸ್ ಜೌಹರ್ ಅಹ್ಸನಿ ವೇಣೂರು ರವರು ಉದ್ಘಾಟಿಸಿದರು.

ಮರಣ ಹೊಂದುವ ಮುಸ್ಲಿಂ ಮಹಿಳೆಯರ ಅಂತಿಮ ವಿಧಿವಿಧಾನಗಳ ಬಗ್ಗೆ ನಜ್ಮುನ್ನಿಸಾ ಫಾಳಿಲಿಯ್ಯ ಜೀರ್ಮಕ್ಕಿ ಯವರು ತರಬೇತಿ ನೀಡಿದರು.

ಇದೇ ಸಂಧರ್ಭದಲ್ಲಿ ಮಹಿಳಾ ಸಾಧಕರಾದ ಡಾ. ಸಾಜಿದಾ, ನೆಜ್ಮುನ್ನಿಸಾ ಫಾಳಿಲಿಯ್ಯ,
ರಂಲಾಬಿ ಅಲ್ ಫಾಳಿಲಿಯ್ಯ, ತೌಫೀಕ ತಸ್ರೀನ ಫಾಳಿಲಿಯ್ಯ, ಆಯಿಶತುಲ್ ಫರ್ಝಾನ ಅಲ್ ಫಾಳಿಲ ಇವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಪ್ರ.ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿ ಹಾರಿಸ್ ಪಳ್ಳಿಕಲ್ ವಂದಿಸಿದರು.
ಕಾರ್ಯಕ್ರಮದಲ್ಲಿ
ಶಿಹಾಬ್ , ಅಬ್ದುಲ್ ಕಾದರ್ ಅತ್ತಿಮಾರಡ್ಕ , ಅಶ್ರಫ್ GAK
, ಇಬ್ರಾಹಿಂ ಜೀರ್ಮುಕಿ, ಸಿದ್ದೀಕ್, ಹನೀಫ್ ಸಹಕರಿಸಿದರು