ಲೋಕಸಭಾ ಚುನಾವಣೆ : ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನದವರೆಗೆ ಶೇ.52.49 ಮತದಾನ

0

ಲೋಕಸಭಾ ಚುನಾವಣೆ ನಡೆಯುತಿದ್ದು ಬೆಳಗ್ಗೆ 7 ಗಂಟೆಯಿಂದ ‌ಮತದಾನ ಆರಂಭಗೊಂಡಿದೆ. ಪ್ರತೀ ಎರಡು ಗಂಟೆಗೊಮ್ಮೆ ವಿಧಾನಸಭಾ ‌ಕ್ಷೇತ್ರವಾರು ಮತ ಚಲಾವಣೆಯ ಶೇಕಡಾ ವನ್ನು ಅಧಿಕಾರಿಗಳು ಸಂಗ್ರಹ ಮಾಡುತಿದ್ದು, ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಮಧ್ಯಾಹ್ನದವರೆಗೆ ಶೇ.52.49 ಮತದಾನವಾಗಿದೆ.

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 233 ಬೂತ್ ಗಳಲ್ಲಿ ಮತದಾನ ನಡೆಯುತಿದ್ದು, ಒಟ್ಟು 2 ಲಕ್ಷದ 8 ಸಾವಿರದ 853 ಮಂದಿ ಮತದಾರರಿದ್ದಾರೆ.