ಹಸೆಮಣೆ ಏರುವ ಮುನ್ನ ವೋಟ್ ಮಾಡಿದ ಅವಳಿ ನವವಧುಗಳು..!

0

ಗುತ್ತಿಗಾರು ಗ್ರಾಮದ ಬಳ್ಳಕ್ಕ, ಉದಯಗಿರಿ ನಾರಾಯಣ ನಾಯ್ಕರ ಅವಳಿ ಪುತ್ರಿಯರಾದ ನವ್ಯಶ್ರೀ ಹಾಗೂ ನಂದಶ್ರೀಯವರು ಹಸೆಮಣೆ ಏರುವ ಮುನ್ನ ದಿಬ್ಬಣದ ವಾಹನದಲ್ಲಿಯೇ ತನ್ನ ತಂದೆಯೊಂದಿಗೆ
ಬಂದು ಇಬ್ಬರು ಕೂಡ ಮತ ಚಲಾಯಿಸಿದ್ದಾರೆ.

ಇವರ ವಿವಾಹವು ಇಂದು ಶ್ರೀ ಶಾಂತಾದುರ್ಗಾ ದೇವಸ್ಥಾನ ನಿಡ್ಡಳ್ಳಿಯಲ್ಲಿ ನಡೆದಿದ್ದು, ಅವಳಿ ಸಹೋದರಿಯರು ಮದುವೆ ಸಂದರ್ಭದಲ್ಲೂ ಮತದಾನ ಮಾಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ