ಸಂಪಾಜೆ ಸಹಕಾರಿ ಸಂಘದ ನಿರ್ದೇಶಕರ ವಿದೇಶ ಪ್ರಯಾಣಕ್ಕೆ ಗೌರವಾರ್ಪಣೆ

0

ದ. ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಗಣಪತಿ ಭಟ್ ಪಿ. ಎನ್. ರವರು ಕುಟುಂಬಸ್ಥರೊಂದಿಗೆ ವಿದೇಶಿ ಪ್ರಯಾಣ ಕೈಗೊಳ್ಳಲಿರುವ ಈ ಶುಭ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ವತಿಯಿಂದ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಯವರು ಗೌರವಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್, ನಿರ್ದೇಶಕರಾದ ಜಾನಿ ಕೆ. ಪಿ., ಹಮೀದ್ ಯಚ್, ಪಂಚಾಯತ್ ಸದಸ್ಯ ಶೌವಾದ್ ಗೂನಡ್ಕ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.