p>

ಸುಳ್ಯ ಕೆ.ವಿ.ಜಿ. ಡೆಂಟಲ್ ಕಾಲೇಜಿಗೆ 2 ಚಿನ್ನದ ಪದಕಗಳೊಂದಿಗೆ 35 ರ್‍ಯಾಂಕ್‌ಗಳು

0


ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ನಡೆಸಿದ ದಂತ ವ್ಯೆದ್ಯಕೀಯ (ಬಿ.ಡಿ.ಯಸ್) ಹಾಗೂ ಸ್ನಾತಕೋತ್ತರ ವಿಭಾಗ (ಎಂ.ಡಿ.ಎಸ್) ಪರೀಕ್ಷೆಗಳಲ್ಲಿ ಸುಳ್ಯದ ಕೆ.ವಿ.ಜಿ. ಡೆಂಟಲ್ ಕಾಲೇಜಿನ ೦೨ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಚಿನ್ನದ ಪದಕ, ದಂತ ವ್ಯೆದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ ೧೨ ರ್‍ಯಾಂಕುಗಳನ್ನು, ದಂತ ವ್ಯೆದ್ಯಕೀಯ ಪದವಿ ವಿಭಾಗದಲ್ಲಿ ೨೩ ರ್‍ಯಾಂಕ್‌ಗಳನ್ನು ಹೀಗೆ ಒಟ್ಟು ೩೫ ರ್‍ಯಾಂಕ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕನ್ಸರ್ವೇಟಿವ್ ಡೆಂಟಿಸ್ಟ್ರಿ (ಅoಟಿseಡಿvಚಿಣive ಆeಟಿಣisಣಡಿಥಿ & ಇಟಿಜoಜoಟಿಣiಛಿs) ವಿಭಾಗದ ಮುಖ್ಯಸ್ಥರಾದ ಡಾ. ಕೃಷ್ಣಪ್ರಸಾದ್ ಎಲ್. ಅವರ ಮಾರ್ಗದರ್ಶನದಲ್ಲಿ ಅವರ ಮಾರ್ಗದರ್ಶನದಲ್ಲಿ ಡಾ. ಪ್ರಿಯಾಂಕ ಯಾದವ್ ಎಂ.ಡಿ.ಎಸ್. ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್, ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ (ಔಡಿಚಿಟ & ಒಚಿxiಟಟoಜಿಚಿಛಿiಚಿಟ Suಡಿgeಡಿಥಿ) ವಿಭಾಗ ಮುಖ್ಯಸ್ಥರಾದ ಡಾ. ಪ್ರಸನ್ನ ಕುಮಾರ್ ಡಿ. ಅವರ ಮಾರ್ಗದರ್ಶನದಲ್ಲಿ ಡಾ. ಮಾಡಾಲ ಭಾರ್ಗವ್ ರಾಮ್ ಎಂ.ಡಿ.ಎಸ್. ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಪಡೆದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಚಿನ್ನದ ಪದಕಕ್ಕೆ ಅರ್ಹರಾಗಿದ್ದಾರೆ.


ಕನ್ಸರ್ವೇಟಿವ್ ಡೆಂಟಿಸ್ಟ್ರಿ ((Conservative Dentistry & Endodontics)) ವಿಭಾಗದ ಎಂ.ಡಿ.ಎಸ್. ಪರೀಕ್ಷೆಯಲ್ಲಿ ಡಾ. ಮಂಜುಷ ಗೋವಿಂದ್ ಜಿ. ೪ನೇ ರ್‍ಯಾಂಕ್, ಡಾ. ಭಾವನಾ ಶ್ರೀನಿವಾಸನ್ ೫ನೇ ರ್‍ಯಾಂಕ್, ಡಾ.ಆಯಿಷಾತ್ ಅಫಿಯ ೮ನೇ ರ್‍ಯಾಂಕ್ ಪಡೆದಿರುತ್ತಾರೆ.
ಪೀಡೋಡಾಂಟಿಕ್ಸ್ (Peಜoಜoಟಿಣiಛಿs) ವಿಭಾಗದ ಮುಖ್ಯಸ್ಥರಾದ ಡಾ. ಸವಿತಾ ಸತ್ಯಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಡಾ. ಪವಿತ್ರ ವಿ ರಾವ್ ೬ನೇ ರ್‍ಯಾಂಕ್, ಡಾ. ಮರ್ಸಿ ವಿನೋಲಿಯ ಟಿ ೯ನೇ ರ್‍ಯಾಂಕ್ ಅಲ್ಲದೆ ಡಾ. ಅರವಿಂದ ಎ ೧೦ನೇ ರ್‍ಯಾಂಕ್ ಪಡೆದಿರುತ್ತಾರೆ.
ಅರ್ಥೋಡಾಂಟಿಕ್ಸ್ (ಔಡಿಣhoಜoಟಿಣiಛಿs) ವಿಭಾಗದ ಮುಖ್ಯಸ್ಥರಾದ ಡಾ. ಶರತ್ ಕುಮಾರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪಿ.ಜಿ. ಡಿಪ್ಲೋಮ ಪರೀಕ್ಷೆಯಲ್ಲಿ ಡಾ. ಗೌರಿ ಕೆ. ಪ್ರಥಮ ರ್‍ಯಾಂಕ್ ಪಡೆದಿರುತ್ತಾರೆ ಹಾಗೂ ಎಂ.ಡಿ.ಎಸ್. ಪರೀಕ್ಷೆಯಲ್ಲಿ ಡಾ. ಶ್ರೇಯಾ ರಾಜಗೋಪಾಲ್ ೯ನೇ ರ್‍ಯಾಂಕ್ ಪಡೆದಿರುತ್ತಾರೆ.
ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನ ಕುಮಾರ್ ಡಿ. ಅವರ ಮಾರ್ಗದರ್ಶನದಲ್ಲಿ ಡಾ. ಆಯಿಷಾ ಕಲೀಮ್ ಪಾಷಾ ೫ನೇ ರ್‍ಯಾಂಕ್, ಡಾ. ನಿಧಿ ಜಾನ್ಸನ್ ಉಕ್ಕೇನ್ ೯ನೇ ರ್‍ಯಾಂಕ್ ಪಡೆದಿರುತ್ತಾರೆ.


ಬಿ.ಡಿ.ಯಸ್. ಪದವಿಯ ಜನರಲ್ ಅನಾಟಮಿ ವಿಷಯದಲ್ಲಿ ಡಾ. ಕವನ ಎಸ್ ೨ನೇ ರ್‍ಯಾಂಕ್, ಡಾ. ಐಲೀನ್ ತಂಗಚನ್ ೭ನೇ ರ್‍ಯಾಂಕ್, ಡಾ. ಆಯಿಷತುಲ್ ಶಮೀಮ ೯ನೇ ರ್‍ಯಾಂಕ್, ಡಾ. ಅಲೀನ್ ಥೋಮಸ್, ಡಾ. ದೀಪಕ್‌ರಾಜ್ ಕೆ.ಸಿ., ಡಾ. ನೈವೇಧ್ಯ ಸುರೇಶ್ ರವರುಗಳು ೧೦ನೇ ರ್‍ಯಾಂಕ್ ಪಡೆದಿರುತ್ತಾರೆ.
ಡೆಂಟಲ್ ಅನಾಟಮಿ ವಿಷಯದಲ್ಲಿ ಡಾ. ಆರ್ಯ ರಾಜ್ ಎಸ್. ೭ನೇ ರ್‍ಯಾಂಕ್, ಡಾ. ಫಾತಿಮ ಶಮ್ಲಾ ೯ನೇ ರ್‍ಯಾಂಕ್ ಪಡೆದಿರುತ್ತಾರೆ. ಡೆಂಟಲ್ ಮೆಟಿರಿಯಲ್ಸ್ ವಿಷಯದಲ್ಲಿ ಡಾ. ಕವನ ಎಸ್. ೪ನೇ ರ್‍ಯಾಂಕ್, ಡಾ. ಅಮೇಯ ಸಾಬು ೯ನೇ ರ್‍ಯಾಂಕ್, ಡಾ. ಐಲೀನ್ ತಂಗಚನ್ ೧೦ನೇ ರ್‍ಯಾಂಕ್ ಪಡೆದಿರುತ್ತಾರೆ.
ಪ್ರಿಕ್ಲೀನಿಕಲ್ ಕನ್ಸರ್‌ವೇಟಿವ್ ಡೆಂಟಿಸ್ಟ್ರಿ ವಿಷಯದಲ್ಲಿ ಡಾ. ನೈವೇಧ್ಯ ಸುರೇಶ್ ೮ನೇ ರ್‍ಯಾಂಕ್, ಡಾ. ಅಮೇಯ ಸಾಬು ಮತ್ತು ಡಾ. ಫಾತಿಮ ಜಿನನ್ ಪಿ.ಪಿ. ೯ನೇ ರ್‍ಯಾಂಕ್, ಡಾ. ಫಾತಿಮ ಶಮ್ಲಾ ೧೦ನೇ ರ್‍ಯಾಂಕ್ ಪಡೆದಿರುತ್ತಾರೆ. ಪ್ರಿಕ್ಲೀನಿಕಲ್ ಪ್ರೊಸ್ತೋಡಾಂಟಿಕ್ಸ್ ವಿಷಯದಲ್ಲಿ ಡಾ. ನೈವೇಧ್ಯ ಸುರೇಶ್ ೧೦ನೇ ರ್‍ಯಾಂಕ್ ಪಡೆದಿರುತ್ತಾರೆ.


ಪೆರಿಯೊಡೋಂಟಿಕ್ಸ್ ವಿಷಯದಲ್ಲಿ ಡಾ. ಐಲೀನ್ ತಂಗಚನ್ ೪ನೇ ರ್‍ಯಾಂಕ್, ಡಾ. ಮರಿಯಮ್ ಫಾಹೀಮಾ ಬಿ.ಎಫ್., ಡಾ. ನೈವೇಧ್ಯ ಸುರೇಶ್ ಮತ್ತು ಡಾ. ರಜತ್ ಅಪ್ಪಣ್ಣ ಬಿ.ಎಸ್. ೧೦ನೇ ರ್‍ಯಾಂಕ್ ಪಡೆದಿರುತ್ತಾರೆ. ಕನ್ಸರ್ವೇಟಿವ್ ಡೆಂಟಿಸ್ಟ್ರಿ ವಿಷಯದಲ್ಲಿ ಡಾ. ಐಲೀನ್ ತಂಗಚನ್ ೭ನೇ ರ್‍ಯಾಂಕ್ ಪಡೆದಿರುತ್ತಾರೆ. ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಷಯದಲ್ಲಿ ಡಾ. ದೀಪ್ತಿ ಎಲ್. ೫ನೇ ರ್‍ಯಾಂಕ್, ಡಾ. ಆಯಿಷತುಲ್ ಶಮೀಮ ೭ನೇ ರ್‍ಯಾಂಕ್
ಪಡೆದಿರುತ್ತಾರೆ.
ಈ ಅಭೂತಪೂರ್ವ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು, ವಿಭಾಗ ಮುಖ್ಯಸ್ಥರುಗಳನ್ನು ಹಾಗೂ ಬೋಧಕ ಸಿಬ್ಬಂದಿಗಳನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ, ಸದಸ್ಯರಾದ ಡಾ. ಜ್ಯೋತಿ ಆರ್ ಪ್ರಸಾದ್ ಹಾಗೂ ಕಾಲೇಜಿನ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಪ್ರಾಂಶುಪಾಲರಾದ ಡಾ. ಮೋಕ್ಷಾ ನಾಯಕ್ ಮತ್ತು ಆಡಳಿತ ಮಂಡಳಿಯ ಎಲ್ಲಾ ಸದಸ್ಯರುಗಳು ಅಭಿನಂದಿಸಿದ್ದಾರೆ.