p>

ಕೋಟೆಮುಂಡುಗಾರಿನಲ್ಲಿ ವಿಜ್ರಂಬಿಸಿದ ಮಹಾಕಲಿ ಮಗಧೇಂದ್ರ” ಯಕ್ಷಗಾನ

0

ಯುವಕ ಮಂಡಲ ರಿ.‌ಕಳಂಜ ವತಿಯಿಂದ ಕೋಟೆ ಮುಂಡುಗಾರು ಶಾಲಾ ಕ್ರೀಡಾಂಗಣದಲ್ಲಿ ಶ್ರೀ ಮ‌ಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಮೇಳದ “ಮಹಾಕಲಿ ಮಗದೇಂದ್ರ” ಎಂಬ ಯಕ್ಷಗಾನ ಪ್ರಸಂಗ ವೈಭವದಿಂದ ಮಾ.8 ರಂದು ನಡೆಯಿತು.

ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆದಿದ್ದು ವೈದ್ಯಕೀಯ ಸೇವೆಯಲ್ಲಿ ಉತ್ತಮ ಮುನ್ನುಡಿಯಿಟ್ಟಿರುವ ಶಸ್ತ್ರಚಿಕಿತ್ಸೆ ಯ ಸ್ಪೆಷಲಿಸ್ಟ್ ಡಾl ಕಿಶನ್ ರಾವ್ ಬಾಳಿಲ, ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಪಾಸಾಗಿರುವ ಮಮತಾ ಪಾಂಡಿಪಾಲು, ಎಸ್.ಎಸ್.ಎಲ್.ಸಿ ಯ ಸಾಧಕಿ ಸಂಗೀತ ದಳ ಅವರುಗಳನ್ನು ಗೌರವಿಸಲಾಯಿತು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇದರ ಸಂಚಾಲಕ ವಸಂತ್ ಶೆಟ್ಟಿ, ಕಳಂಜ ಗ್ರಾ.ಪಂ ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ, ಜೆ.ಎಸ‌.ಡಬ್ಲ್ಯೂ ಸ್ಟೀಲ್ ಇಂಡಸ್ಟ್ರೀಸ್ ಬಳ್ಳಾರಿ ಇದರ ಡಿ‌.ಜಿ.ಎಂ, ಎಸ್ .ಆರ್ ಪ್ರಸಾದ್ , ಕಲಾ ಪೋಷಕರಾದ ಶಂಭಯ್ಯ ಭಟ್ ಮುಂಡುಗಾರು, ಕೋಟೆಮುಂಡುಗಾರು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗಾಧರ ತೋಟದಮೂಲೆ, ಯುವಕ ಮಂಡಲದ ಗೌರವಾಧ್ಯಕ್ಷ ರಾಮಯ್ಯ ರೈ ಕಜೆಮೂಲೆ, ಅಧ್ಯಕ್ಷ ಶಿವರಾಮ ಕಜೆಮೂಲೆ, ಕಾರ್ಯದರ್ಶಿ ರಮೇಶ್ ಕೋಡಿಯಡ್ಕ ಮತ್ತಿತರು ವೇದಿಕೆಯಲ್ಲಿದ್ದರು.


ಕಾರ್ಯಕ್ರಮದಲ್ಲಿ ಯಕ್ಷಗಾನ ಪೋಷಕರಾದ ವಸಂತ್ ಶೆಟ್ಟಿ, ಎಸ್.ಆರ್ ಪ್ರಸಾದ್, ಶಂಭಯ್ಯ ಭಟ್ ಅವರುಗಳನ್ನು ಗೌರವಿಸಲಾಯಿತು.
ಡಾ. ನಾರಾಯಣ ಶೇಡಿಕಜೆ ಕಾರ್ಯಕ್ರಮ ನಿರೂಪಿಸಿದರು.