ಇಂದು ಮತ್ತು ನಾಳೆ (ಎ.1-2) ಸುಳ್ಯ ಕೊರಂಬಡ್ಕ ಶ್ರೀ ಮೊಗೇರ್ಕಳ ದೈವಗಳ ನೇಮೋತ್ಸವ – ಕೊರಗಜ್ಜ ದೈವದ ನೇಮ

0

ಸುಳ್ಯ ಜಯನಗರ ಕೊರಂಬಡ್ಕದ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ ಶ್ರೀ ಗುಳಿಗ ದೈವ, ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಕಾಲಾವಧಿ ಶ್ರೀ ಮೊಗೇರ್ಕಳ ದೈವಗಳ ನೇಮೋತ್ಸವವು ಎ.1 ಮತ್ತು ಎ.2ರಂದು ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದ ಸನ್ನಿಧಿಯಲ್ಲಿ ನಡೆಯಲಿದೆ.


ಎ.1ರಂದು ಬೆಳಗ್ಗೆ ಗಣಪತಿ ಹವನ, ಅಪರಾಹ್ನ ೪ಕ್ಕೆ ಶ್ರೀ ಗುಳಿಗ ದೈವದ ನೇಮ ಹಾಗೂ ಹರಕೆಯ ಗುಳಿಗ ದೈವದ ನೇಮ, ಪ್ರಸಾದ ವಿತರಣೆ, ಸಂಜೆ ಗಂಟೆ ೬ ಕ್ಕೆ ದೀಪಾರಾಧನೆ, ಬಳಿಕ ಶ್ರೀ ನಾಗಬ್ರಹ್ಮ ದೇವರಿಗೆ ಮಹಾಪೂಜೆ, ಭಜನಾ ಕಾರ್ಯಕ್ರಮ , ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯುವುದು. ರಾತ್ರಿ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು, ೧೨ ಕ್ಕೆ ಸತ್ಯ ದೇವತೆ ಶ್ರೀ ತನ್ನಿ ಮಾಣಿಗ ದೈವದ ನೇಮ, ಬಳಿಕ ಪಾತ್ರಿಗಳ ದರ್ಶನ.
ಎ.2ರಂದು ಬೆಳಗ್ಗೆ ಪ್ರಸಾದ ವಿತರಣೆ, ಬಳಿಕ ಸ್ವಾಮಿ ಕೊರಗಜ್ಜ ದೈವದ ನೇಮ ಮತ್ತು ಹರಕೆಯ ಕೋಲ ನಡೆಯುವುದು. ಬಳಿಕ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ಜರುಗುವುದು.