ತಡರಾತ್ರಿ ಮಗುವಿಗೆ ಜನ್ಮವಿತ್ತು ರಕ್ತಸ್ರಾವದಿಂದ ಒದ್ದಾಡುತ್ತಿದ್ದ ತಾಯಿ

0

ಆಸ್ಪತ್ರೆಗೆ ಸೇರಿಸಿ ಪ್ರಾಣ ಉಳಿಸಿದ ಸಮಾಜ ಸೇವಕ

ಟೆಂಟ್ ನೊಳಗೆ ಮಗುವಿಗೆ ಜನ್ಮವಿತ್ತು ರಕ್ತ ಸ್ರಾವದಿಂದ ಒದ್ದಾಡುತ್ತಿದ್ದ ತಾಯಿಯನ್ನು ಸಮಾಜಸೇವಕರೊಬ್ಬರು ಕ್ಲಪ್ತ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿ ತಾಯಿ ಮಗುವಿನ ಪ್ರಾಣ ಉಳಿಸಿದ್ದಾರೆ.

ಸುಳ್ಯ ತಾಲೂಕಿನ ಕಲ್ಮಕಾರುಗ್ರಾಮಕ್ಕೆ ಕೂಲಿ ಕೆಲಸಕ್ಕೆಂದು ಅಸ್ಸಾಂ ಮೂಲದ ಕುಟುಂಬವೊಂದು ಸಣ್ಣ ಟೆಂಟ್‌ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಟೆಂಟ್ ನಲ್ಲಿ ವಾಸವಿದ್ದ ಮಹಿಳೆಯೊಬ್ಬರು ಗರ್ಭಿಣಿಯಾಗಿದ್ದು ಹೆರಿಗೆ ನೋವು ಕಾಣಿಸಿಕೊಂಡಿತ್ತು . ತಕ್ಷಣ ಆಕೆಯನ್ನು ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದರೂ ಆಕೆ ಮಗುವಿಗೆ ಜನ್ಮ ನೀಡಿದ್ದಳು.

ವಿಪರೀತ ರಕ್ತ ಸ್ರಾವದಿಂದ ಮಹಿಳೆ ನರಳುತ್ತಿದ್ದ ಮಾಹಿತಿ ತಿಳಿದು ಸಮಾಜ ಸೇವಕ ಚಂದ್ರ ಕಡೋಡಿಯವರ ಮೂಲಕ ಅಮರ ಸುಳ್ಯ ಚಾರಿಟೇಬಲ್ ಟ್ರಸ್ಟ್ ಆಂಬ್ಯುಲೆನ್ಸ್‌ನಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ತಾಯಿ- ಮಗುವನ್ನು ಜಾಗರುಕತೆಯಿಂದ ಕರೆದುಕೊಂಡು ಬರಲಾಯಿತು.

ತಡರಾತ್ರಿ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಸಿಕಿತ್ಸೆ ಕೊಡಿಸುವಲ್ಲಿ ಸಮಾಜ ಸೇವಕ ಸಫಲರಾಗಿದ್ದಾರೆ . ಸದ್ಯ ತಾಯಿ ಹಾಗೂ ಗಂಡು ಮಗು ಚಿಕಿತ್ಸೆಯ ನಂತರ ಚೇತರಿಸಿಕೊಂಡು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.