ಶ್ರೀಮತಿ ಸರಸ್ವತಿ ಸುಬ್ಬಯ್ಯ ಮಾವಿನಕಟ್ಟೆ ನಿಧನ

0

ದೇವಚಳ್ಳ ಗ್ರಾಮದ ಮಾವಿನಕಟ್ಟೆಯಲ್ಲಿರುವ ಕೊಯಿಂಗೋಡಿ ಕುಟುಂಬದ ದಿ. ಸುಬ್ಬಯ್ಯರವರ ಧರ್ಮಪತ್ನಿ ಶ್ರೀಮತಿ ಸರಸ್ವತಿ ಸುಬ್ಬಯ್ಯರವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಎ.12) ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 91 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಕೃಷ್ಣಪ್ಪಗೌಡ ಮಾವಿನಕಟ್ಟೆ, ಚಂದ್ರಶೇಖರ ಮಾವಿನಕಟ್ಟೆ, ವಿಶ್ವನಾಥ ಮಾವಿನಕಟ್ಟೆ, ಪುತ್ರಿ ಶ್ರೀಮತಿ ವಿಮಲಾ, ಸೊಸೆಯಂದಿರು ಅಳಿಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.