ಬಿಜೆಪಿ ಅಭ್ಯರ್ಥಿ ಕು. ಭಾಗೀರಥಿ ಮುರುಳ್ಯರಿಂದ ಬಿರುಸಿನ ಪ್ರಚಾರ

0

ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕು. ಭಾಗೀರಥಿಯವರು ಏ. 12ರಂದು ಬಿರುಸಿನ ಪ್ರಚಾರ ಆರಂಭಿಸಿದರು.

ಕೊಯಿಲ ಶಕ್ತಿ ಕೇಂದ್ರ ವ್ಯಾಪ್ತಿಯ ಅಲಂಕಾರು, ಕೊಯಿಲ, ರಾಮಕುಂಜ, ಪೆರಾಬೆ, ಕುಟ್ರುಪಾಡಿ, ಗ್ರಾಮಗಳಲ್ಲಿ ಮತಪ್ರಚಾರ ನಡೆಸಲಾಯಿತು.

ಈ ಸಂದರ್ಭದಲ್ಲಿ ಭಾಜಪ ಅಭ್ಯರ್ಥಿ ಕು. ಭಾಗಿರಥಿ ಮುರುಳ್ಯ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಮಿನುಗಾರಿಕ ಅಭಿವೃದ್ದಿ ನಿಗಮದ ಅಧ್ಯಕ್ಷ ಎ.ವಿ ತೀರ್ಥರಾಮ, ಸುಳ್ಯ ಪ್ರಭಾರಿ ಪೂವಾಜೆ ಕುಶಾಲಪ್ಪ ಗೌಡ, ಕೃಷ್ಣ ಶೆಟ್ಟಿ ಕಡಬ, ಜಿಲ್ಲಾ ರೈತ ಮೊರ್ಚಾದ ಉಪಾಧ್ಯಕ್ಷ ಮಹೇಶ್ ರೈ ಮೇನಾಲ, ಯುವಮೊರ್ಚಾ ಅಧ್ಯಕ್ಷ ಕೃಷ್ಣ ಎಂ.ಆರ್, ಸುಳ್ಯ ಮಂಡಲ ಸಾಮಾಜಿಕ ಜಾಲಾತಾಣದ ಸಹ ಸಂಚಾಲಕ ಪ್ರಸಾದ್ ಕಾಟೂರು, ಪಕ್ಷದ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತ್ ನ ವಿವಿಧ ಜವಾಬ್ದಾರಿಯ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.