ಪ್ರಜಾಕೀಯ ಪಕ್ಷದಿಂದ ಸುಳ್ಯ ಅಭ್ಯರ್ಥಿಯಾಗಿ ರಮೇಶ್ ಬೂಡು

0

ಎ.17 ರಂದು‌ ನಾಮಪತ್ರ ಸಲ್ಲಿಕೆ

ಚಿತ್ರನಟ ಉಪೇಂದ್ರ ರವರ ನೇತೃತ್ವದ ಪ್ರಜಾಕೀಯ ಪಕ್ಷದಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸುಳ್ಯದ ಬೂಡು ನಿವಾಸಿ ರಮೇಶ್ ರವರು ಸ್ಪರ್ಧಿಸಲಿದ್ದಾರೆ.‌ ಅವರು ಎ.17 ರಂದು ನಾಮಪತ್ರ ಸಲ್ಲಿಸಲಿದ್ದಾರೆ.

“ನಾನು ಪ್ರಜಾಕೀಯ ಪಕ್ಷದ ಧೋರಣೆಗಳನ್ನು ನೆಚ್ಚಿಕೊಂಡವನು. ಚುನಾವಣೆಯಲ್ಲಿ ಆಯ್ಕೆಯಾದವರು ಜನರ ಸೇವೆ ಮಾಡಬೇಕು. ಜನರು ಹೇಳಿದ ಕೆಲಸವನ್ನು ಗೆದ್ದವರು ಮಾಡಬೇಕು.‌ಆದರೆ ಈಗ ಹಾಗಿಲ್ಲ.‌ ಗೆದ್ದವರು ಹೇಳಿದಂತೆ ಜನರು‌ಕೇಳುವ ಸ್ಥಿತಿ ಇದೆ.‌ ಅದು ಬದಲಾಗಬೇಕು.‌ ಅದಕ್ಕಾಗಿ‌ ನಾನು ಪ್ರಜಾಕೀಯ ಅಭ್ಯರ್ಥಿ ಯಾಗಿ ಸ್ಪರ್ಥಿಸುತ್ತಿದ್ಧೇನೆ. ಕೆಳದ ಭಾನುವಾರ ನನಗೆ ಪಕ್ಷದ ಬಿ ಫಾರಂ ದೊರೆತಿದೆ.‌ಎ.17 ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಸ್ವಚ್ಚ, ಪ್ರಾಮಾಣಿಕ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಡುವುದು ಮತ್ತು ಜನರು ಹೇಳಿದ ಅಭಿವೃದ್ಧಿ ಕೆಲಸ ನನ್ನ ಗುರಿ ಎಂದು ರಮೇಶ್ ಬೂಡು ಸುದ್ದಿಗೆ ತಿಳಿಸಿದ್ದಾರೆ.