ಪಂಜದಲ್ಲಿ ಉಚಿತ ಭಜನಾ ತರಬೇತಿ ಶಿಬಿರ ಉದ್ಘಾಟನೆ

0


“ಎಲ್ಲರು ಒಂದಾಗಿ ದೇವರನ್ನು ಒಲಿಸುವ ಸುಲಭದ ಮಾರ್ಗ ಭಜನೆ” : ಆರಿಕೋಡಿ ಧರ್ಮದರ್ಶಿ ಹರೀಶ್ ಗೌಡ

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಪಂಜ ಮತ್ತು ನಿಂತಿಕಲ್ಲು ವಲಯ , ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಸುಳ್ಯ ಪಂಜ ಮತ್ತು ನಿಂತಿಕಲ್ಲು ವಲಯ ಇದರ ಆಶ್ರಯದಲ್ಲಿ 14ನೇ ವರ್ಷದ ಉಚಿತ ಭಜನಾ ತರಬೇತಿ ಶಿಬಿರವು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಎ.15 ರಂದು ಉದ್ಘಾಟನೆ ಗೊಂಡಿತು.


ಬೆಳ್ತಂಗಡಿ ತಾಲೂಕು ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಶ್ರೀ ಹರೀಶ್ ಗೌಡ ಆರಿಕೋಡಿ ದೀಪ ಪ್ರಜ್ವಲನೆ ನಡೆಸಿ ಉದ್ಘಾಟಿಸಿ ಮಾತನಾಡಿ
“ಭಜನೆ ಇದ್ದಲ್ಲಿ ವಿಭಜನೆ ಇಲ್ಲ. ಅದು ಮನಸ್ಸನ್ನು ಶಾಂತವಾಗಿ ಪವಿತ್ರ ಗೊಳಿಸುತ್ತದೆ. ಭಜನೆಗೆ ಜಾತಿ,ಗಂಡು, ಹೆಣ್ಣು, ಧರ್ಮ ಬೇಧವಿಲ್ಲ. ಹತ್ತು ಜನ ಒಟ್ಟಾಗಿ ಸೇರಿ ದೇವರನ್ನು ಒಲಿಸುವ ಸುಲಭ ಧ್ಯಾನದ ಮಾರ್ಗ ಭಜನೆ”. ಎಂದು ಅವರು ಹೇಳಿದರು. ಇದೇ ವೇಳೆ ಅವರು ಭಜನಾ ಸಂಕೀರ್ತನೆಯ ಕೈಪಿಡಿ ಬಿಡುಗಡೆ ಗೊಳಿಸಿದರು.
ಶ್ರೀ ಶಾರದಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಪುತ್ಯ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಯತೀಶ್ ದುಗ್ಗಲಡ್ಕ, ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ, ಪಂಜ ವನಿತಾ ಸಮಾಜದ ಅಧ್ಯಕ್ಷ ಶ್ರೀಮತಿ ಮಾಲಿನಿ ಕುದ್ವ , ಹಾಗೂ ಪಂಜ ವಲಯ ಭಜನಾ ಪರಿಷತ್ ಅಧ್ಯಕ್ಷ ಕುಮಾರ್ ಕುರ್ಲುಪಾಡಿ, ವಲಯ ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಕಣ್ಕಲ್ , ತರಬೇತುದಾರರಾದ ಶ್ರೀಮತಿ ನಳಿನಿ ವಿ ಆಚಾರ್ಯ, ಶ್ರೀಮತಿ ರಮ್ಯಾ ದಿಲೀಪ್ ಬಾಬ್ಲುಬೆಟ್ಟು, ಬಿ.ಎಂ.ಎಸ್ ಘಟಕದ ಪೂರ್ವಾಧ್ಯಕ್ಷ ದೇವಪ್ಪ ಗೌಡ, ಜೈ ಕರ್ನಾಟಕ ಯುವಕ ಮಂಡಲದ ಅಧ್ಯಕ್ಷ ಕೇಶವ ಕೋಟ್ಯಡ್ಕ , ಭಜನಾ ತರಬೇತಿ ಸಂಚಾಲಕ ಕುಸುಮಾಧರ ಕೆಮ್ಮೂರು, ಕಾರ್ಯದರ್ಶಿ ನಾರಾಯಣ ಶಿರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ ವೆಂಕಟ್ರಮಣ ಆಚಾರ್ಯ ಕಲ್ಮಡ್ಕ ಪ್ರಾರ್ಥಿಸಿದರು.


ಲೋಕೇಶ್ ಬರೆಮೇಲು ಪ್ರಾಸ್ತಾವಿಕ ಗೈದು ಸ್ವಾಗತಿಸಿದರು. ಭಜನಾ ಮಂಡಳಿಯ ಕಾರ್ಯದರ್ಶಿ ಗುರುಪ್ರಸಾದ್ ತೋಟ ನಿರೂಪಿಸಿದರು.ಕುಸುಮಾಧರ ಕೆಮ್ಮೂರು ವಂದಿಸಿದರು.
ತರಬೇತಿ ಶಿಬಿರದಲ್ಲಿ ಸುಮಾರು250 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.ಜಿಲ್ಲೆಯ ಪ್ರಸಿದ್ಧ ತರಬೇತುದಾರರು ತರಬೇತಿ ನೀಡಲಿದ್ದಾರೆ.

ಎ.21 ರಂದು ಸಂಜೆ ಸಮಾರೋಪ ಸಮಾರಂಭ ಜರುಗಲಿದ್ದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಸಾದ್ವಿ ಶ್ರೀ ಶ್ರೀ ಮಾತಾನಂದಮಯೀ ಯವರು ಆಶೀರ್ವಚನ ನೀಡಲಿದ್ದಾರೆ. ಭಜನಾ ತರಬೇತಿ ಶಿಬಿರದ ಸಂಚಾಲಕ ಕುಸುಮಾಧರ ಕೆಮ್ಮೂರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಉದ್ಘಾಟಿಸಲಿದ್ದಾರೆ. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು ಅರ್ಧ ಎಕಾಹ ಭಜನೆಯನ್ನು ಉದ್ಘಾಟಿಸಲಿದ್ದಾರೆ.


ರಾಜ್ಯ ಭಜನಾ ಪರಿಷತ್ ಕಾರ್ಯದರ್ಶಿ ಪುರುಷೋತ್ತಮ ಪಿ ಕೆ, ಯೋಜನಾಧಿಕಾರಿ ನಾಗೇಶ್ ಪಿ, ಲಯನ್ಸ್ ಕ್ಲಬ್ ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಮೇಲ್ವಿಚಾರಕರಾದ ಶ್ರೀಮತಿ ಪ್ರಿಯಾ ಎನ್, ಶ್ರೀಮತಿ ಉಷಾ ಕಲ್ಯಾಣಿ, ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಅಂದು ಸಂಜೆ ಭಜನೋತ್ಸವ ಅರ್ಧ ಏಕಾಹ ಭಜನೆ, ಶ್ರೀ ಸತ್ಯನಾರಾಯಣ ದೇವರ ಪೂಜೆ ಜರುಗಲಿದೆ.