ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಕಾಲಾವಧಿ ಜಾತ್ರೋತ್ಸವ ಭಕ್ತಿಸಡಗರದೊಂದಿಗೆ ಸಂಪನ್ನ

0

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆದ ಬಂಡಿ ಉತ್ಸವ ಹಾಗೂ ದೈವಗಳ ನೇಮೋತ್ಸವ

ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಮೇ. 2ರಿಂದ ಮೇ.6ರವರೆಗೆ ಸಾವಿರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ ಭಕ್ತಿ ಸಂಭ್ರಮದೊಂದಿಗೆ ಜರುಗಿತು.

ಮೇ.2ರಂದು ಬೆಳಿಗ್ಗೆ ಮುಂಡೈಗೆ ಶೃಂಗಾರ, ರಾತ್ರಿ ದೇವರ ಪೂಜೆ ನಡೆಯಿತು. ಮೇ.3ರಂದು ಪೂರ್ವಾಹ್ನ ಗಣಪತಿ ಹೋಮ, ಧ್ವಜಾರೋಹಣ ನಡೆದು , ರಾತ್ರಿ ಸಂಕ್ರಮಣ ವಾಲಸಿರಿ ಕೊಡಿಬಂಡಿ ಉತ್ಸವ ಜರುಗಿತು.


ಮೇ.4ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು.
ಮೇ.5ರಂದು ಬೆಳಗ್ಗಿನ ಜಾವ ದೈವದ ನಡುಬಂಡಿ ಉತ್ಸವ , ಸಿಡಿಮದ್ದು ಪ್ರದರ್ಶನಗೊಂಡಿತು.

ಮೇ.5ರಂದು ಬೆಳಿಗ್ಗೆ ಕಿರಿಯರ ನೇಮ, ನಾಯರ್ ನೇಮ, ಹರಿಕೆ ಕಾಣಿಕೆ ಸ್ವೀಕಾರ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ನಡೆದು, ರಾತ್ರಿ ಸಂಕ್ರಮಣ ಪೂಜೆ ಸಮಾರಾಧನೆ ನಡೆಯಿತು. ಮೇ.6ರಂದು ಬೆಳಿಗ್ಗೆ ವಾಲಸಿರಿ ಕಡೆಬಂಡಿ ಉತ್ಸವ, ಹಿರಿಯರ ನೇಮ, ಹರಿಕೆ ಕಾಣಿಕೆ ಸ್ವೀಕಾರ, ಆರಾಟ, ಧ್ವಜಾರೋಹಣ, ಅಂಬುಕಾಯಿ, ಹಣ್ಣುಕಾಯಿ ನಡೆದು ಜಾತ್ರೋತ್ಸವವು ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಗೌಡ ನಡುಬೆಟ್ಟು, ದೈವದ ಪ್ರಧಾನ ಅರ್ಚಕ ಸುಭಾಷ್ ರೈ ಕುಕ್ಕನ್ನೂರು, ಶ್ರೀ ಕಿನ್ನಿಮಾಣಿ ಪೂಮಾಣಿ ಸೇವಾ ಸಮಿತಿ ಅಧ್ಯಕ್ಷ ಸಂಜೀವ ನಾಯಕ್ ಕುಕ್ಕಂದೂರು, ಆಡಳಿತ ಮಂಡಳಿಯ ಸದಸ್ಯರುಗಳಾದ ಗಂಗಾಧರ ರೈ ಸೋಣಂಗೇರಿ, ಚಿನ್ನಯ್ಯ ಆಚಾರ್ಯ ಕುಕ್ಕನ್ನೂರು, ಪುಟ್ಟಣ್ಣ ಗೌಡ ಹುಲಿಮನೆ, ರುಕ್ಮಯ್ಯ ಗೌಡ ನಡುಮನೆ, ದೇವಿಪ್ರಸಾದ್ ಗೌಡ ನೆಕ್ರಾಜೆ, ಗಂಗಾಧರ ಆಚಾರ್ಯ, ಶೇಷಪ್ಪ ರೈ ಕುಕ್ಕನ್ನೂರು, ಸತೀಶ ಕೊಮ್ಮೆಮನೆ, ವೆಂಕಟ್ರಮಣ ಭಟ್ ಬೊಮ್ಮೆಟ್ಟಿ, ಕುಕ್ಕನ್ನೂರು ಹದಿನಾರು ಒಕ್ಕಲು ಹಾಗೂ ಸೋಣಂಗೇರಿ ಹತ್ತು ಒಕ್ಕಲು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.