ಕೊಡಗು ಸಂಪಾಜೆ ಅರಮನೆತೋಟ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲ ಸಂಪನ್ನ

0

ಕೊಡಗು ಸಂಪಾಜೆ ಗ್ರಾಮದ ಅರಮನೆತೋಟ ತೋಟಛಾವಡಿ ಗದ್ದೆಯಲ್ಲಿರುವ ಶ್ರೀಮಹಾ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮೇ‌.10ರಂದು ಕೂಡಿ ಮೇ.11ರಂದು ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ಹಾಗೂ ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು.

ಎ .26 ರಂದು ಶ್ರೀ ದೈವಕ್ಕೆ ಕೊಳ್ಳಿ ಕಡಿಯುವ ಮೂಹೂರ್ತ ನಡೆಯಿತು. ಮೇ 3 ರಂದು ಗೊನೆ ಕಡಿಯುವ ಮೂಹೂರ್ತ ನಡೆಯಿತು.
ಮೇ 10 ರಂದು ರಾತ್ರಿ ದೀಪಾರಾಧನೆ ಹಾಗೂ ಶ್ರೀ ಮಹಾವಿಷ್ಣು ಮೂರ್ತಿ ದೈವದ ಭಂಡಾರವನ್ನು ಒತ್ತೆಕೋಲ ಗದ್ದೆಗೆ ತಂದು ವಿಷ್ಣುಮೂರ್ತಿ , ಬಳಿಕ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು.
ರಾತ್ರಿ 10 ಗಂಟೆಗೆ ಅನ್ನ ಸಂತರ್ಪಣೆ , ರಾತ್ರಿ 12:30 ಕ್ಕೆ ಶ್ರೀ ವಿಷ್ಣು ಮೂರ್ತಿ ದೈವದ ಕುಳ್ಚಾಟ, ಬಳಿಕ ಪೊಟ್ಟನ್ ದೈವದ ಕೋಲ, ಪ್ರಸಾದ ವಿತರಣೆ ನಡೆಯಿತು.

ರಾತ್ರಿ 6 ತಂಡಗಳ ಉಪಸ್ಥಿತಿಯಲ್ಲಿ ಹಗ್ಗ ಜಗ್ಗಾಟ ಪಂದ್ಯಾವಳಿ ನಡೆಸಲಾಯಿತು.
ಮೇ.11ರಂದು ಬೆಳಿಗ್ಗೆ ದೈವದ ಆಗ್ನಿ ಪ್ರವೇಶ ಹಾಗೂ ಪ್ರಸಾದ ವಿತರಣೆ ನಡೆಯಿತು. ಬಳಿಕ ದೈವದ ಮಾರಿಕಳ ಪ್ರವೇಶ, ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಅಧ್ಯಕ್ಷ ಕೊರಗಪ್ಪ ಅರಮನೆ ತೋಟ, ಗೌರವಾಧ್ಯಕ್ಷ ಶಭರೀಶ್ ಕುದ್ಕುಳಿ, ಕಾರ್ಯದರ್ಶಿ ಕೃಷ್ಣ ಅರಮನೆ ತೋಟ, ಉಪ ಕಾರ್ಯದರ್ಶಿ ಚಂದ್ರ ಶೇಖರ ಅರಮನೆ ತೋಟ , ದೈವಸ್ಥಾನದ ಪೂಜಾರಿ ಪಕೀರಾ ಅಂಬಟ ಕಜೆ, ಖಜಾಂಜಿ ಮುರಳಿ ಹೆಚ್.ಕೆ, ಕೊಡಗು ಸಂಪಾಜೆ ಗ್ರಾಂ.ಪಂ ಅಧ್ಯಕ್ಷೆ ರಮಾದೇವಿ ಬಾಲ ಚಂದ್ರ ಕಳಗಿ, ಕಲ್ಲುಗುಂಡಿ ಮಹಾವಿಷ್ಣು ಮೂರ್ತಿ ದೈವಸ್ಥಾದ ಕಾರ್ಯದರ್ಶಿ ಕೆ.ವಿ. ಮಂಜುನಾಥ್, ಕೋಶಾಧಿಕಾರಿ ಬಿ.ಆರ್. ಪದ್ಮಯ್ಯ, ಮಾಜಿ ಅಧ್ಯಕ್ಷ ಶ್ರೀಧರ ಮಾದೆಪಾಲು , ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಜಯಕುಮಾರ್ ಚಿದ್ಕಾರ್, ಲೋ ಹಿತಾಶ್ವ ಕುದ್ಕುಳಿ, ವಿಕ್ರಾಂತ್ ಅರಮನೆ ತೋಟ, ಧನಂಜಯ ಮೂರ್ನಾಡು,ಹಾಗೂ ಅರಮನೆ ತೋಟ ವಿಷ್ಣುಮೂರ್ತಿ ದೈವಸ್ಥಾದ ಸರ್ವ ಸದಸ್ಯರು, ಊರಿನ ಭಕ್ತಾಧಿಗಳು ಉಪಸ್ಥಿತರಿದ್ದರು.