ಕಾಂಗ್ರೆಸ್ ಪ್ರಣಾಳಿಕೆ: ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ )ಬದಲು ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿ ಅನುಷ್ಟಾನ ಸ್ವಾಗತಾರ್ಹ :ಕೆ. ಎಂ. ಮುಸ್ತಫ

0

ಹೊಸ ರಾಷ್ಟ್ರೀಯ ನೀತಿ ಜ್ಯಾರಿ ಬಳಿಕ ದೇಶದ ಶಿಕ್ಷಣ ಕ್ಷೇತ್ರ ಅಲ್ಲೋಲ ಕಲ್ಲೋಲ ಆಗಿದೆ, ಇದರಿಂದ ಶಿಕ್ಷಕ ವರ್ಗ ತೀವ್ರ ಅಸಮಾಧಾನ ಹೊಂದಿದ್ದರೂ ಆಡಳಿತದ ವಿರುದ್ದ ಧ್ವನಿ ಎತ್ತಲಾಗದ ಪರಿಸ್ಥಿತಿ, ಬಹುತ್ವವೇ ಭಾರತದ ಜೀವಾಳ, ಏಕಭಾಷೆ, ಏಕಸoಸ್ಕೃತಿ, ಏಕಸಿಲೆಬಸ್,ರಾಜ್ಯವೇ ಸ್ಥಳೀಯ ಅಗತ್ಯತೆಗೆ ತಕ್ಕoತೆ ಪಠ್ಯಕ್ರಮ ರಚಿಸಲು ಸಾಧ್ಯವಾಗುತ್ತದೆ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಬೇಸತ್ತು ಸಂಕಷ್ಟಕ್ಕೆ ಈಡಾದ ಮಕ್ಕಳು, ಶಿಕ್ಷಕರು ಮತ್ತು ಪೋಷಕರಿಗೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಯಲ್ಲಿ ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿ ಮಾಡುವ ಭರವಸೆ ನೀಡಿರುವುದು ಸ್ವಾಗತಾರ್ಹ ಎಂದು ದ. ಕ.ಮತ್ತು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಸುಳ್ಯ ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿರುತ್ತಾರೆ