ಅರಂತೋಡು – ಆಡ್ತಲೆ‌ ರಸ್ತೆಗೆ ಡಬಲ್ ಕೋಟ್ ಡಾಮರು ಯಾವಾಗ ? : ಊರವರ ಪ್ರಶ್ನೆ

0

ಅರಂತೋಡು- ಅಡ್ತಲೆ ರಸ್ತೆ‌ ಕಾಮಗಾರಿ 1 ಕೋಟಿ‌ ಅನುದಾನದ ಮೊದಲ ಹಂತದ ಕಾಮಗಾರಿ ಪೂರ್ತಿಗೊಂಡಿದ್ದು, 2 ಕೋಟಿ ರೂ‌ ಅನುದಾನದ ಕಾಮಗಾರಿ ಅರ್ಧದಲ್ಲಿದೆ. ಅದು‌ ಯಾವಾಗ ಎಂದು ಅಡ್ತಲೆ ನಾಗರಿಕರು ಕೇಳುತ್ತಿದ್ದಾರೆ.

ಅರಂತೋಡು ಗ್ರಾಮದ ಅಡ್ತಲೆ ರಸ್ತೆ ಅಭಿವೃದ್ಧಿ ಗಾಗಿ ಅಡ್ತಲೆಯ ನಾಗರಿಕ ಹಿತರಕ್ಷಣ ವೇದಿಕೆಯ ಪಟ್ಟು ಹಿಡಿದ ಪರಿಣಾಮವಾಗಿ 1 ಕೋಟಿ ರೂ ಅನುದಾನದಲ್ಲಿ ಅರಂತೋಡು ನಿಂದ ಕಾಮಗಾರಿ ಆರಂಭವಾಗಿ 1357‌ಮೀಟರ್ ರಸ್ತೆ ಆಗಿತ್ತು.‌ಬಳಿಕ ಒತ್ತಡದ ಪರಿಣಾಮ ರೂ.2 ಕೋಟಿ ಇಡಲಾಗಿತ್ತು. ಆ ಕಾಮಗಾರಿ ಆರಂಭವಾಗಿ ಇದೀಗ ಒಂದು ಕೋಟು ಡಾಮರು ಹಾಕಲಾಗಿದೆ. ಎರಡನೇ ಕೋಟು ಡಾಮರು‌ ಹಾಕಲು ಯಾವಾಗ ಎಂದು ಊರವರು ಇಲಾಖೆಗಳನ್ನು ಪ್ರಶ್ನಿಸುತ್ತಿದ್ದಾರೆ.

ಇನ್ನೂ ಇದೆ ಸಮಸ್ಯೆ :
ಅರಂತೋಡಿನಿಂದ 3 ಕೋಟಿ‌ ಕಾಮಗಾರಿ ರಸ್ತೆ ಅಭಿವೃದ್ದಿ ಆಗಿದೆ. ಆದರೆ ಈ ರಸ್ತೆ ಬದಿ ಅರ್ಧ ಅಡಿ ಸಹ ಜಾಗ ಇಲ್ಲ ಮತ್ತು ವಿದ್ಯುತ್ ಕಂಬಗಳು ರಸ್ತೆಗೆ ತಾಗಿಕೊಂಡಿದೆ. ಈ ರಸ್ತೆ ಬದಿಯೇ ಚರಂಡಿ ಮತ್ತು ವಿದ್ಯುತ್ ಕಂಬಗಳು ಹಾಗೂ ಮರಗಳು ಇರುವುದರಿಂದ, ಮುಂದೆ ಆಗಾಗ್ಗೆ ಅಪಾಯಕಾರಿ ಘಟನೆಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ಜಂಟಿಯಾಗಿ ಅಪಾಯ ಸಂಭವಿಸುವ ಮೊದಲು ಎಚ್ಚೆತ್ತು ಈ ಬಗ್ಗೆ ಮಳೆಗಾಲ ಆರಂಭಕ್ಕೆ ಮೊದಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಬೇಡಿಕೆ.


ಈ ರಸ್ತೆಯ ದುಸ್ಥಿತಿಯಿಂದ ಕಳೆದ ಮೇ.14ರಂದು ಟಿಪ್ಪರ್ ಸೈಡ್ ಗೆ ಹೋಗಿದ್ದು ಅದನ್ನು ಜೆಸಿಬಿ ಮೂಲಕ ಮೇಲೆತ್ತಲಾಗಿದ್ದು ಎರಡು ದಿನ ಅಂತರದಲ್ಲಿ,ಸ್ವಲ್ಪ ಕೆಳಗೆ ಕಾರ್ ಮತ್ತು ಪಿಕ್ ಅಪ್ ವಾಹನ ಚರಂಡಿಗೆ ಬಿದ್ದಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

1 ಕೋಟಿ‌ ಅನುದಾನದ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಎರಡನೇ ಹಂತದ ಕಾಮಗಾರಿಯ ಸುಮಾರು 2.5 ಕಿ ಮೀ ರಸ್ತೆಯು ಕೇವಲ ಒಂದು ಕೋಟ್ ಡಾಮಾರಿಕರಣ ಆಗಿದ್ದು ಇನ್ನೊಂದು ಕೋಟ್ ಬಾಕಿ ಇದೆ. ಲೋಕೋಪಯೋಗಿ ಇಲಾಖೆಯಲ್ಲಿ ವಿಚಾರಿಸಿದಾಗ,ಕೆಲವು ತಾಂತ್ರಿಕ ಸಮಸ್ಯೆ ಗಳು ಇರುತ್ತದೆ ಎಂದು ತಿಳಿಸಿದ್ದಾರೆ. ಅತೀ ಶೀಘ್ರವಾಗಿ ಎರಡನೇ ಕೋಟ್ ಡಾಮಾರಿಕರಣ ಮುಗಿಸಬೇಕು, ಅಲ್ಲದೆ ವೇದಿಕೆಯ ಬೇಡಿಕೆಯಂತೆ ಅಡ್ತಲೆ ತನಕ ರಸ್ತೆ ಅಭಿವೃದ್ಧಿ ಗೆ ಇನ್ನೂ ಒಂದು ಕಿ ಮೀ ಕಿಂತ ಅಧಿಕ ದೂರ ಬಾಕಿ ಆಗಿದ್ದು, ಬಹು ಬೇಡಿಕೆಯ ಹಾಗೂ ತಾಲೂಕಿನಲ್ಲೇ ಅತೀ ಪ್ರಮುಖವಾದ ಅರಂತೋಡು- ಎಲಿಮಲೆ ರಸ್ತೆಯು ಶೀಘ್ರವಾಗಿ ಅಭಿವೃದ್ಧಿಯಾಗಬೇಕು ಎಂದು ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಆಗ್ರಹಿಸಿದ್ದಾರೆ.