ಸುಳ್ಯ ಕೆ.ವಿ.ಜಿ. ಐ.ಟಿ.ಐಗೆ ಪ್ರವೇಶಾತಿ ಆರಂಭ

0

ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ದ.ಕ. ಇದರ ಆಡಳಿತದಡಿಯಲ್ಲಿ ಕೆ.ವಿ.ಜಿ ಐ.ಟಿ.ಐ ಸುಳ್ಯ ದ.ಕ. ಇದರ ೨೦೨೩-೨೪ನೇ ಸಾಲಿನ ಆನ್ ಲೈನ್ ಮುಖಾಂತರ ಪ್ರವೇಶಾತಿಗಾಗಿ ಅರ್ಜಿ ಅಹ್ವಾನಿಸಲಾಗಿದೆ. ಸಂಸ್ಥೆಯಲ್ಲಿ ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಮತ್ತು ಮೆಕ್ಯಾನಿಕ್ ಮೋಟಾರು ವಾಹನ ಎಂಬ ಎರಡು ವರ್ಷಗಳ ಅವಧಿಯ ವೃತ್ತಿಗಳಲ್ಲಿ ತರಬೇತಿ ನೀಡಲಾಗುತ್ತದೆ. ಸರಕಾರದ ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ಹತ್ತನೆ ತರಗತಿ ಪಾಸ್ ಮಾಡಿದ ಪ್ರಮಾಣ ಪತ್ರ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಡ ಪಂಗಡ, ಹಿಂದುಳಿದ ವರ್ಗ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸರಕಾರದ ನಿಯಮಾನುಸಾರ ಮೀಸಲಾತಿ ಇರುತ್ತದೆ. ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಂಸ್ಥೆಯ ಕಛೇರಿಗೆ ಬಂದಲ್ಲಿ ಅರ್ಜಿಯನ್ನು ನೀಡಲಾಗುವುದು. ಅಲ್ಲದೆ ಹೆಚ್ಚಿನ ಮಾಹಿತಿ ಕೊಡಲಾಗುವುದು ಎಂಬುದಾಗಿ ಆಡಳಿತ ಮಂಡಳಿ ಮತ್ತು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.