ನಿವೃತ್ತ ಉಪನ್ಯಾಸಕ ಧರ್ಮಪಾಲ ಗೌಡ ನೆಕ್ಕಿಲ ನಿಧನ

0

ಐವತ್ತೊಕ್ಲು ಗ್ರಾಮದ ನೆಕ್ಕಿಲ
ಧರ್ಮಪಾಲ ಗೌಡ ರವರು ಮೇ.16ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 79 ವರುಷ ವಯಸ್ಸಾಗಿತ್ತು.
ಅವರು ಪಂಜ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಮತ್ತು ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಶಿಕ್ಷಕರಾಗಿದ್ದು ಬಳಿಕ ಉಪನ್ಯಾಸಕರಾಗಿ ಮುಂಬಡ್ತಿ ಹೊಂದಿ ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಗಣಿತ ಶಾಸ್ತ್ರ ಉಪನ್ಯಾಸಕರಾಗಿ ಸೇವೆ ಗೈದು ನಿವೃತ್ತ ಹೊಂದಿದ್ದರು.ಮೃತರು ಪತ್ನಿ ಶ್ರೀಮತಿ ರತ್ನ, ಪುತ್ರ ಗಣೇಶ್, ಪುತ್ರಿ ಡಾ.ರೂಪಾ ಶೃಂಗೇರಿ, ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ