ಕೋಲ್ಚಾರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ- ವಿಷ್ಣುಮೂರ್ತಿ ದೈವದ ಭಂಡಾರ ಆಗಮನ

0

ಕೋಲ್ಚಾರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆಯುತ್ತಿರುವ ದೈವಂಕಟ್ಟು ಮಹೋತ್ಸವದ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ತೊಡಂಞಲ್ ನಡೆಯಲಿದ್ದು ಕೋಲ್ಚಾರು ತರವಾಡು ಶ್ರೀ ವಿಷ್ಣುಮೂರ್ತಿ ಧರ್ಮದೈವ ಮತ್ತು ಉಪದೈವಗಳ ಚಾವಡಿಯಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ದೈವದ ಪಾತ್ರಿ ಸತೀಶ್ ಗುಂಡ್ಯ ರವರ ನೇತೃತ್ವದಲ್ಲಿ ವಯನಾಟ್ ದೇವಸ್ಥಾನಕ್ಕೆ ಆಗಮಿಸಿತು.


ಈ ಸಂದರ್ಭದಲ್ಲಿ ಕೋಲ್ಚಾರು ಕುಟುಂಬಸ್ಥರು ಹಾಗೂ ತೀಯ ಸಮಾಜ ಬಾಂಧವರು ಮತ್ತು ಭಕ್ತಾದಿಗಳು ಜತೆಯಲ್ಲಿದ್ದರು.