ಮೇ.30ರೊಳಗೆ ಸಂಪಾಜೆಯಲ್ಲಿ ಪಯಸ್ವಿನಿ ನದಿಯ‌ ಹೂಳೆತ್ತದಿದ್ದರೆ ತಾಲೂಕು ಕಚೇರಿ ಎದುರು ಧರಣಿ

0

ಸಂಪಾಜೆ ಗ್ರಾ.ಪಂ. ಸಾಮಾನ್ಯ ಸಭೆ

ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿದರು. ಸಭೆಯಲ್ಲಿ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಹಾಗೂ ಬೀದಿ ದೀಪಗಳ ನಿರ್ವಹಣೆ ಬಗ್ಗೆ ಚರ್ಚಿಸಲಾಯಿತು. ವಿಶೇಷವಾಗಿ ಸಂಪಾಜೆ ಗ್ರಾಮದ ಹೊಳೆಯ ಹೂಳೆತ್ತುವಿಕೆ ಬಗ್ಗೆ ಚರ್ಚಿಸಿ ಎಲ್ಲಾ ಸದಸ್ಯರು ಸರ್ವನುಮತದಿಂದ ಸಂಪಾಜೆ ಗ್ರಾಮದ ನದಿಗಳಲ್ಲಿ ತುಂಬಿರುವ ಹೂಳನ್ನು ಮೇ.30ರ ಒಳಗೆ ತೆರವುಗೊಳಿಸದಿದ್ದಲ್ಲಿ ಸುಳ್ಯದ ತಾಲೂಕು ಕಚೇರಿ ಮುಂದೆ ಧರಣಿ ನಡೆಸಲು ನಿರ್ಧರಿಸಲಾಯಿತು.ವಿವಿಧ ಯೋಜನೆಗಳ ಕ್ರಿಯಾಯೋಜನೆ ತಯಾರಿಸಲು ನಿರ್ಣಸಲಾಯಿತು.

ವಿವಿಧ ಸಮಿತಿ ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು ಹೆದ್ದಾರಿ ಇಲಾಖೆಯ ಗೂನಡ್ಕ ಕಲ್ಲುಗುಂಡಿ ಬಳಿ ಚರಂಡಿ ದುರಸ್ಥಿ ಹಾಗೂ ಗೂನಡ್ಕ ಬಳಿ ಹೆದ್ದಾರಿ ಇಲಾಖೆಯ ಕುಸಿದ ಮಣ್ಣನ್ನು ತಕ್ಷಣ ತೆರವುಗೊಳಿಸುವರೇ ಇಲಾಖೆಯ ಗಮನಕ್ಕೆ ತರಲು ತೀರ್ಮಾನಿಸಲಾಯಿತು ಮಳೆಗಾಲ ಆರಂಭ ವಾಗಿರುವ ಹಿನ್ನಲೆಯಲ್ಲಿ ವರ್ತಕರು ಸಾರ್ವಜನಿಕರು ಪ್ಲಾಸ್ಟಿಕ್ ಕಶ್ಮಲ ವಸ್ತುಗಳು ಬೊಂಡದ ಚಿಪ್ಪುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಎಸದರೆ ಕ್ರಮ ಕೈಗೊಳ್ಳುವರೇ ಅಧಿಕಾರ ನೀಡಲಾಯಿತು. ಕಾರ್ಯದರ್ಶಿ ಪದ್ಮಾವತಿ ವರದಿ ಹಾಗೂ ಲೆಕ್ಕ ಪತ್ರ, ಮಂಡಿಸಿದರು ಸಾರ್ವಜನಿಕರಿಂದ ಬಂದ ಅರ್ಜಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಸೋಮಶೇಖರ್ ಕೊಇಂಗಾಜೆ, ಅಬೂಸಾಲಿ ಗೂನಡ್ಕ, ಜಗದೀಶ್ ರೈ, ಸವಾದ್ ಗೂನಡ್ಕ, ಎಸ್. ಕೆ. ಹನೀಫ್, ವಿಜಯ ಕುಮಾರ್, ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ರಜನಿ ಶರತ್, ಅನುಪಮಾ, ಸುಶೀಲಾ ಉಪಸ್ಥಿತರಿದ್ದರು.