ಫೇಸ್‌ಬುಕ್ ಕಮೆಂಟ್ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಪ್ರತಿಕ್ರಿಯೆ

0

ಯಾರೇ ಆಗಲಿ ಇನ್ನೊಬ್ಬರ ಅಪ್ಪ-ಅಮ್ಮನ ಬಗ್ಗೆ ಮಾತನಾಡುವುದು ಸರಿಯಲ್ಲ

ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ವಿರುದ್ಧ ಫೇಸ್‌ಬುಕ್‌ನಲ್ಲಿ ನಿಂದನಾತ್ಮಕ ಕಮೆಂಟ್ ಹಾಕಿದ ಆರೋಪದಲ್ಲಿ ಅಶೋಕ್ ರೈಯವರ ಅಭಿಮಾನಿಗಳಿಂದ ಆಕ್ರೋಶಕ್ಕೆ ಒಳಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣಕ್ಕೆ ಸಂಬಂಧಿಸಿ ಸ್ವತಃ ಅಶೋಕ್‌ಕುಮಾರ್ ರೈಯವರು ಪುತ್ತೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗಾರರನ್ನುದ್ಧೇಶಿಸಿ ಮಾತನಾಡುವ ವೇಳೆ ಪತ್ರಕರ್ತರು ಸುಳ್ಯ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ ಯಾರೇ ಆಗಲಿ ಇನ್ನೊಬ್ಬರ ಅಪ್ಪ-ಅಮ್ಮನ ಬಗ್ಗೆ ಮಾತನಾಡುವುದು ಸರಿಯಲ್ಲ. ನಾನು ಯಾರಿಗೂ ಕೂಡ ಅನ್ಯಾಯ ಮಾಡಿದವನಲ್ಲ. ಸುಮ್ಮನೆ ನಮ್ಮ ಅಮ್ಮ ಅಪ್ಪನನ್ನು ಬೈದರೆ ನಮ್ಮವರು ನಮ್ಮ ಅಭಿಮಾನಿಗಳು ಅದನ್ನು ಕೇಳಲಿಕ್ಕೆ ಹೋಗಿದ್ದಾರೆ. ಮೊದಲಿಗೆ ನನಗೆ ಇದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.ನಂತರದ ಬೆಳವಣಿಗೆಯಲ್ಲಿ ವಿಷಯ ನನ್ನ ಗಮನಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.